ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಕಿಸಾನ್ ಅಧ್ಯಕ್ಷ ಬಸವರಾಜ್ ವಿ ಶಿವಗಂಗಾರಿಂದ‌ ಅಹಾರ ಕಿಟ್ಟುಗಳ ವಿತರಣೆ

Published

on

ಸುದ್ದಿದಿನ,ಚನ್ನಗಿರಿ : ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಶಿವಗಂಗಾ‌ ವಿ ಬಸವರಾಜ್ ಗುರುವಾರ ಚನ್ನಗಿರಿ ಪಟ್ಟಣದಲ್ಲಿ‌ ಕ್ವಾರೇಂಟಿನಲ್ಲಿರುವ ಕೂಲಿ ಕಾರ್ಮಿಕರುಗಳಿಗೆ, ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರೋನ ಮಹಾಮಾರಿ ರೋಗಕ್ಕೆ ಭಯ ಬೀಳದಿರಿ ಜಾಗೂರುಕತೆಯಿಂದ ಇದ್ದು ಮುಖಕ್ಕೆ ಮಾಸ್ಕನ್ನು ಹಾಕಿಕೊಂಡು ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ ಹೆಚ್ ಶ್ರೀನಿವಾಸ್ , ಪುರಸಭೆ ಸದಸ್ಯ ಇಮ್ರಾನ್ , ಲಿಂಗಣ್ಣ , ಗೌಸ್ ಪೀರ್ , ಕಾಂಗ್ರೆಸ್ ಮುಖಂಡರುಗಳಾದ ಮಂಜುನಾಥ್ , ಜೀತೇಂದ್ರ , ತನ್ವೀರ್ ಸೇರಿದಂತೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಸಲ್ಮಾನ ಬಾಂದವರು ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version