ದಿನದ ಸುದ್ದಿ

ಬಸವ ಜಯಂತಿ | ಧರ್ಮ ದೊಡ್ಡದಲ್ಲ, ದಯೆ ದೊಡ್ಡದು : ವೀರಭದ್ರಪ್ಪ ಪಿಎಸ್ಐ

Published

on

ಸುದ್ದಿದಿನ,ದಾವಣಗೆರೆ : ಮನುಷ್ಯನಿಗಿಂತ ಮಾನವೀಯತೆಯೆ ದೊಡ್ಡದು ಧರ್ಮಕ್ಕಿಂತ ‌ದಯೆಯೇ ದೊಡ್ಡದು ಎಂದು ವಿಶ್ವಕ್ಕೆ ಸಾರಿದವರು ಬಸವೇಶ್ವರರು ಎಂದು ಪಿ ಎಸ್ ಐ ವೀರಭದ್ರಪ್ಪ ಹೇಳಿದರು.

ತಾಲೂಕಿನ ಮಾಯಕೊಂಡ ಪೋಲಿಸ್ ಠಾಣೆಯಲ್ಲಿ 887 ನೇಯ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿಯನ್ನು ‌ಭಕ್ತಿ ಪೂರ್ವಕವಾಗಿ‌ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ವಿಶ್ವದ   ಮಹಾನ್ ಮಾನವತವಾದಿ , ಅಂದ ಶ್ರಧ್ಧೆ , ಮೂಡನಂಬಿಕೆ , ಅನಿಷ್ಠ ಸಂಪ್ರದಾಯ , ಅಸಮಾನತೆ ಮತ್ತು ವೈದಿಕ ಧರ್ಮವನ್ನು ದಿಕ್ಕರಿಸಿ ಶ್ತೇಷ್ಠವಾದ ಲಿಂಗಾಯಿತ ಧರ್ಮವನ್ನು‌ ಹುಟ್ಟು ಹಾಕುವುದರ ಮೂಲಕ ತಮ್ಮ ವಚನ ಅಮೃತದ ನೆಲೆಯಲ್ಲಿ ಸಕಲ‌ ಜೀವಿಗಳ ಲೇಸನ್ನು ಬಯಸಿ , ಜನರಿಗೆ ಕಾಯಕವೇ ಕೈಲಾಸವೆಂದು ಸರಿಯಾದ ಮಾರ್ಗವನ್ನು  ತೋರಿದ‌ವರು ಕ್ರಾಂತಿ ಸೂರ್ಯ ಬಸವಣ್ಣನವರು ಎಂದರು.

ಬಸವ ಜಯಂತಿಯನ್ನು ಆಚರಿಸುವದರೊಂದಿಗೆ  ಬಸವಣ್ಣನವರ  ವಚನ ಹಾಗೂ ಮೂಡನಂಬಿಕೆ ಅಸಮಾನತೆ ವಿರುದ್ದ ಹೋರಾಡಿದ  ಕೆಲ ಮಾಹಿತಿಯನ್ನು ಸಿಬ್ಬಂದಿಗಳಿಗೆ ಮನಮುಟ್ಟುವಂತೆ ವಚನಗಳ ಅರಿವು ಮೂಡಿಸಿದರು ಎಂದು ನುಡಿದರು.

ಈ ಸಂದರ್ಭದಲ್ಲಿ , ಎ,ಎಸ್ಐ ಗಳಾದ  ಮೂರ್ತಿ ,ಮಲ್ಲಿಕಾರ್ಜುನ, ರಾಜಪ್ಪ, ಸಿಬ್ಬಂದಿಗಳಾದ, ನಾಗರಾಜ್ , ಸಂತೋಷ್,ರಂಗಸ್ವಾಮಿ, ಅಣ್ಣಯ್ಯ, ಶ್ರೀನಿವಾಸ್ ,ದಾದಪೀರ್, ಶಶಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version