ದಿನದ ಸುದ್ದಿ
ದಾವಣಗೆರೆ | ವಲಸಿಗರು ತಮ್ಮ ರಾಜ್ಯಕ್ಕೆ ತೆರಳಲು ‘ಸೇವಾಸಿಂಧು’ ಸಂಪರ್ಕಿಸಿ
ಸುದ್ದಿದಿನ,ದಾವಣಗೆರೆ : ಕೋವಿಡ್ – 19 ವೈರಾಣು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಗಳು ದಾವಣಗೆರೆ ಜಿಲ್ಲೆಯಿಂದ ಹೊರರಾಜ್ಯಕ್ಕೆ ಪ್ರಯಾಣ ವೆಚ್ಚ ಭರಿಸಿ ಹೋಗಲು ಇಚ್ಚಿಸುವವರು ಮತ್ತು ಹೊರರಾಜ್ಯಗಳಿಂದ ದಾವಣಗೆರೆ ಜಿಲ್ಲೆಗೆ ಆಗಮಿಸಲು ಇಚ್ಚಿಸುವವರು ಸೇವಾಸಿಂಧು ಆನ್‍ಲೈನ್ ಪೋರ್ಟಲ್‍ನಲ್ಲಿನ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
http://sevasindhu.Karnataka.gov.in
ಈ ಲಿಂಕ್‍ನ್ನು ಬಳಸಿ ಅಥವಾ ಈ ಕೆಳಕಂಡ ಸೇವಾಸಿಂಧು ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಸೇವಾಸಿಂಧು ಕೇಂದ್ರಗಳ ವಿವರ
ಉಪವಿಭಾಗಾಧಿಕಾರಿಗಳ ಕಚೇರಿ, ದಾವಣಗೆರೆ. ಮಹಾನಗರಪಾಲಿಕೆ, ದಾವಣಗೆರೆ. ಎಲ್ಲಾ ತಾಲ್ಲೂಕು ಕಚೇರಿಗಳು. ಹರಿಹರ ನಗರಸಭೆ. ಚನ್ನಗಿರಿ ಪುರಸಭೆ. ಹೊನ್ನಾಳಿ ಮತ್ತು ಜಗಳೂರಿನ ಪಟ್ಟಣ ಪಂಚಾಯ್ತಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243