ದಿನದ ಸುದ್ದಿ

ದಾವಣಗೆರೆ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್..!‌ ಎಣ್ಣೆ ಯಾಕ್ ಸಿಗ್ತಿಲ್ಲಾ ಗೊತ್ತಾ..!?

Published

on

ಸುದ್ದಿದಿನ, ದಾವಣಗೆರೆ : ರಾಜ್ಯ ಸರ್ಕಾರ ಮೇ 4 ಸೋಮವಾರದಿಂದ ರಾಜ್ಯದಲ್ಲಿ ಬಾರ್ ಗಳನ್ನು ತೆರೆಯಲು ಅವಕಾಶ ನೀಡಿತ್ತು. ರೆಡ್ ಝೋನ್ ‌ಇರುವಲ್ಲಿಯೂ ಅಹ ಬಾರ್ ಓಪನ್ ಆಗಲಿವೆ ಎಂದು ಹೇಳಿತ್ತು. ಆದರೆ ದಾವಣಗೆರೆ ನಗರಕ್ಕೆ ಇದು ಅನ್ವಯಿಸದಾಗಿದೆ.

ದಾವಣಗೆರೆ ಮದ್ಯ ಪ್ರಿಯರಿಗೆ ಶಾಂಕಿಂಗ್ ನ್ಯೂಸ್‌ ಬಂದಿದೆ. ನಗರದಲ್ಲಿ ನೆನ್ನೆ ಒಂದೇ ದಿನಕ್ಕೆ 21 ಕರೊನಾ ಸೋಂಕಿತ ಪ್ರಕರಣ ಹಿನ್ನೆಲೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಆದೇಶ ವಾಪಾಸ್ ಪಡೆಯಲಾಗಿದೆ.

ಇದರಿಂದ ಮದ್ಯ ಪ್ರಿಯರ ಕನಸು ಭಗ್ನವಾದಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಳೆದ 40ದಿನಗಳಿಂದ ಎಣ್ಣೆಗಾಗಿ ಚಡಪಡಿಸುತ್ತಿದ್ದ ಮದ್ಯ ಪ್ರಿಯರಿಗೆ ಅಕ್ಷರಶಃ ಇದು ಶಾಕಿಂಗ್ ನ್ಯೂಸ್ ಆಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧ

  • ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಪಾಲಿಕೆ ವ್ಯಾಪ್ತಿ ಹೊರತು ಪಡಿಸಿ ಜಿಲ್ಲಾದ್ಯಾಂತ ಮಧ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ನಾಗರಾಜ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9989346243

Trending

Exit mobile version