ದಿನದ ಸುದ್ದಿ
ದಾವಣಗೆರೆ ಜನರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿರಲು ಗ್ರಾಮಸ್ಥರ ಶಪಥ..!
ಸುದ್ದಿದಿನ,ದಾವಣಗೆರೆ : ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಅಕ್ಕ ಪಕ್ಕದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ದಾವಣಗೆರೆ ಜನರನ್ನು ಹಳ್ಳಿಗೆ ಬಿಟ್ಟುಕೊಳ್ಳದಿರುವಂತೆ ಸ್ವತಃ ಹಳ್ಳಿಗರೇ ಸ್ವಯಂ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಅಕ್ಕ ಪಕ್ಕದ ಜಿಲ್ಲೆಗೆ ದಾವಣಗೆರೆ ಜನರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಹಾವೇರಿ, ಚಿತ್ರದುರ್ಗ, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲಾ ದಾವಣಗೆರೆ ಜಿಲ್ಲೆಯ ಜನರನ್ನ ಬಿಟ್ಟುಕೊಳ್ಳದಂತೆ ಡಂಗುರ ಸಾರಿಸಲಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕೊಡಿಯಾಳ್ ಹೊಸಪೇಟೆ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಟ್ನಳ್ಳಿ ಪಂಚಾಯತಿ ಗಳಿಂದ ದಾವಣಗೆರೆ ಜನರನ್ನ ಬಿಟ್ಟುಕೊಳ್ಳದಂತೆ ಸೂಚನೆ ನೀಡಿ,ಗ್ರಾಮೀಣ ಭಾಗದ ಜನರು ಡಂಗುರ ಸಾರಿ ಜಾಗೃತಿ ಮೂಡಿಸುತ್ತಿದ್ದಾರೆ. ಅಗತ್ಯ ವಸ್ತುಗಳ ವ್ಯಾಪಾರ ಕ್ಕೆ ಶಿವಮೊಗ್ಗಕ್ಕೆ ಹೋದ ದಾವಣಗೆರೆ ವ್ಯಾಪಾರಿಗಳನ್ನು ವಾಪಸ್ಸು ಕಳುಹಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243