ದಿನದ ಸುದ್ದಿ

ತ್ಯಾವಣಿಗೆ | ಕಂದಾಯ ರಾಜಸ್ವ ನಿರೀಕ್ಷಕರ ಮೇಲೆ ಹಲ್ಲೆ : ಆರೋಪಿಗಳು‌ ಎಸ್ಕೆಪ್

Published

on

ಸುದ್ದಿದಿನ,ಚನ್ನಗಿರಿ : ತ್ಯಾವಣಿಗೆ ನಾಡಕಚೇರಿಯ ಕಂದಾಯ ನಿರೀಕ್ಷರಾದ ಬಸಪ್ಪ ಮಾದರ್ ಅವರ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.

ಘಟನೆ ವಿವರ

ತ್ಯಾವಣಿಗೆಯ ನಾಡ ಕಚೇರಿಯ ಆವರಣದಲ್ಲಿ ಯುವಕರ ಗುಂಪೊಂದು ಕ್ರಿಕೆಟ್ ಆಟವಾಡುತ್ತಿದ್ದು, ಅವರಿಗೆ ಆಟ ಆಡಬೇಡಿ ಮನೆಗೆ ಹೋಗಿ ಎಂದು ಕಂದಾಯ ರಾಜಸ್ವ ನಿರೀಕ್ಷಕ ಬಸಪ್ಪ ಮಾದರ್ ಬುದ್ದಿ ಹೇಳಿ ಕಳುಹಿಸಿರುತ್ತಾರೆ. ಈ ಸಮಯ ಪಾನಮಾತ್ತಾರಾಗಿ ಬಂದ ಯುವಕರಿಬ್ಬರು ಕಂದಾಯ ರಾಜಸ್ವ ನಿರೀಕ್ಷಕರಿಗೆ ಅವ್ಯಾಚ್ಛ ನಿಂದಿಸಿದ್ದಾರೆ. ಆರೋಪಿಗಳನ್ನು ತ್ಯಾವಣಿಗೆ ನಿವಾಸಿಗಳಾದ ರಂಜಿತ್ ಮತ್ತು ಆಂಜನೇಯ ಎಂದು ತಿಳಿದು ಬಂದಿದೆ.

ಬಸವಾಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಚರಣೆ ನಡೆಸುತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version