ದಿನದ ಸುದ್ದಿ
ದಾವಣಗೆರೆ | ಸಚಿವರ ಸಭೆಗೆ ಕಾರ್ಪೊರೇಟರ್ ಗಿಲ್ಲ ಆಹ್ವಾನ : ಸಚಿವರಿಗೆ ತರಾಟೆ
ಸುದ್ದಿದಿನ,ದಾವಣಗೆರೆ : ನಗರಾಭಿವೃದ್ದಿ ಸಚಿವರ ಸಭೆಗೆ ಕಾರ್ಪೋರೇಟರ್ ಗಿಲ್ಲ ಆಹ್ವಾನ ಇಲ್ಲವೆಂದು ಸಚಿವರಿಗೆ ತರಾಟೆ ತಗೆದುಕೊಂಡ ಘಟನೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಡೆದಿದೆ.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ಸಭೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿತ್ತು. ಈ ವೇಳೆ
ವಿರೋಧ ಪಕ್ಷ, ಆಡಳಿತ ಪಕ್ಷದವರಿಗೂ ಆಹ್ವಾನ ನೀಡಿರಲಿಲ್ಲ, ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಸಚಿವರಿಗೆ ತರಾಟೆ ತಗೆದುಕೊಂಡಿದ್ದಾರೆ.
ನಗರದಲ್ಲಿ ಕೊರೊನಾ ಆರ್ಭಟ ಹಿನ್ನಲೆ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಸಭೆಗೆ ಆಹ್ವಾ ನೀಡದೆ ಇದ್ದುದ್ದಕ್ಕೆ ತರಾಟೆ ತಗೆಸುಕೊಂಡು ಪಾಲಿಕೆ ಮುಂದೆ ಪ್ರತಿಭಟನೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243