ದಿನದ ಸುದ್ದಿ
ದಾವಣಗೆರೆ ಐಶ್ವರ್ಯ ಕೃಷ್ಣಮೂರ್ತಿಗೆ ಅಮೇರಿಕಾ ವಿವಿ ಪದವಿ ಪ್ರದಾನ
ಸುದ್ದಿದಿನ,ದಾವಣಗೆರೆ : ನಗರದ ಬಿ.ಎಸ್.ಎನ್.ಎಲ್. ನಿವೃತ್ತ ಅಭಿಯಂತರ ರಾದ ಹದಡಿ ಕೃಷ್ಣಮೂರ್ತಿ, ಮತ್ತು ದಾವಣಗೆರೆ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ , ವೀಣಾ ಕೃಷ್ಣಮೂರ್ತಿ ಯವರ ಮಗಳಾದ ಐಶ್ವರ್ಯ ಕೃಷ್ಣಮೂರ್ತಿರವರು ಅಮೆರಿಕದ ನ್ಯೂಯಾರ್ಕ್ ನಲ್ಲಿ ರುವ “ಸನಿ ಬಫೆಲೋ” ಯುನಿವರ್ಸಿಟಿಯಿಂದ , ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಮೇ 17 ರಂದು ಪಡೆದಿರುತ್ತಾರೆ.
ಮೇ 17 ರಂದು ನ್ಯೂಯಾರ್ಕ್ ನ ಯುನಿವರ್ಸಿಟಿ ಆವರಣದಲ್ಲಿ ನಡೆದ ಪದವಿ ಪ್ರದಾನ ಘಟಿಕೋತ್ಸವ ಸಮಾರಂಭದಲ್ಲಿ ಐಶ್ವರ್ಯ ಅವರಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಐಶ್ವರ್ಯ ಕೃಷ್ಣಮೂರ್ತಿ ಅವರಿಗೆ, ಸನಿ ಬಫೆಲೋ ಯುನಿವರ್ಸಿಟಿ ಪ್ರಾಧ್ಯಾಪಕರು, ತಂದೆ, ತಾಯಿ , ಶ್ರೀಮತಿ ಅನುಪಮ ಕೃಷ್ಣಮೂರ್ತಿ, ಶ್ರೀ ವಿನಯ ಚಂದ್ರ , ವೈದ್ಯ ಮತ್ತು ಕು. ವಿವಾನ್ , ವೈದ್ಯ ಹಾಗೂ ದಾವಣಗೆರೆ ತಿಂಗಳ ಅಂಗಳ ಬಳಗದ ಸದಸ್ಯರು
ಅಭಿನಂದಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243