ದಿನದ ಸುದ್ದಿ

ದಾವಣಗೆರೆ : ಮರುಳು ಗುತ್ತಿಗೆ ಪ್ರದೇಶಕ್ಕೆ ಸಚಿವರ ಭೇಟಿ

Published

on

ಸುದ್ದಿದಿನ,ದಾವಣಗೆರೆ : ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ್ ಬಿ. ಪಾಟೀಲ ಇವರು ಮಂಗಳವಾರ ಹರಿಹರ ತಾಲೂಕಿನ ರಾಜನಹಳ್ಳಿಯ ಮರಳು ಗುತ್ತಿಗೆ ಪ್ರದೇಶಕ್ಕೆ‌ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಗ್ರಾಮಸ್ಥರು ಮರಳು ಗುತ್ತಿಗೆದಾರರು ಕಾನೂನು ಬಾಹಿರವಾಗಿ ಮರಳು ಎತ್ತುವ ಕಾರ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರು ಮರಳು ನೀತಿ ನಿಯಮಾವಳಿಯಡಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹಾಗೂ ವಾಹನಗಳಲ್ಲಿ ಹೆಚ್ಚುವರಿ ಮರಳು ಸಾಗಾಟ ಮಾಡಬಾರದು. ಮರಳು ಗುತ್ತಿಗೆಯಲ್ಲಿ ಬಂದ ಆದಾಯದಲ್ಲಿ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ನೀಡುವ ಅನುದಾನವನ್ನು ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಭೆಗೆ ಮರಳು ಗುತ್ತಿಗೆದಾರರು ಪಾಲ್ಗೊಂಡು, ಸಭೆಯ ನಿರ್ಧಾರದಂತೆ ಕಾರ್ಯನಿರ್ವಹಿಸಬೇಕು ಎಂದರು.

ನದಿಯಲ್ಲಿ ಇಳಿದು ಅಕ್ರಮವಾಗಿ ಮರಳು ತೆಗೆಯುವುದನ್ನು ಬಿಡಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ವೇಳೆ ರಾಜನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹಾಂತೇಶ್, ತಹಶೀಲ್ದಾರ್ ರೆಹಾನ್ ಪಾಷ, ಪಿಡಿಒ ವಿಜಯಲಕ್ಷ್ಮೀ, ಗ್ರಾ.ಪಂ. ಸದಸ್ಯರಾದ ರೇಣುಕಮ್ಮ, ಲಕ್ಷ್ಮಪ್ಪ, ವೀರಬಸಯ್ಯ, ಬಣಕಾರ್ ಹಾಲಪ್ಪ, ಮಂಜುನಾಥ್, ಮಂಜುಳಾ ಗೀರಿಶ್ ಸೇರಿದಂತೆ ಇತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version