ದಿನದ ಸುದ್ದಿ

ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಮಹಿಳಾ ಉದ್ದಿಮೆದಾರರಿಗೆ ಸಹಾಯಧನ

Published

on

ಸುದ್ದಿದಿನ,ದಾವಣಗೆರೆ : ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ವಿಶೇಷ ಘಟಕ/ಗಿರಿಜನ ಉಪ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ ಸಹಾಯಧನ ಸೌಲಭ್ಯ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಜ್ಯ ವಲಯದ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ/ಗಿರಿಜನ ಉಪ ಯೋಜನೆಯಡಿ ಪ.ಜಾ/ಪ.ಪಂ ಸೇರಿದ ವೈಯುಕ್ತಿಕ ಫಲಾನುಭವಿ/ಪಾಲುದಾರಿಕೆ ಸಂಸ್ಥೆ /ಸಂಘ ಸಂಸ್ಥೆಗಳು/ಕಂಪನಿ/ಸಹಕಾರಿ ಕಾಯ್ದೆಯಡಿ ನೊಂದಾಯಿತ ಜವಳಿ ಸಹಕಾರ ಸಂಘಗಳು (ಶೇ.100 ರಷ್ಟು ಪ.ಜಾ/ಪ.ಪಂ ಸದಸ್ಯರನ್ನು ಹೊಂದಿರತಕ್ಕದ್ದು) ಸಂಸ್ಥೆಗಳಿಂದ ಸಣ್ಣ ಮತ್ತು ಅತೀ ಸಣ್ಣ ಜವಳಿ ಕೈಗಾರಿಕಾ ಘಟಕ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಈ ಯೋಜನೆಯಡಿ (ಎಸ್.ಎಂ.ಇ) ಅತೀ ಸಣ್ಣ ಜವಳಿ ಕೈಗಾರಿಕಾ ಘಟಕಗಳು ರೂ.25 ಲಕ್ಷಗಳವರೆಗಿನ ಯಂತ್ರೋಪಕರಣಗಳೊಂದಿಗೆ ಹಾಗೂ ಸಣ್ಣ ಪ್ರಮಾಣದ ಜವಳಿ ಕೈಗಾರಿಕಾ ಘಟಕಗಳು ರೂ. 25 ಲಕ್ಷ ಗಳಿಂದ 500 ಲಕ್ಷಗಳ ಯಂತ್ರೋಪಕರಣಗಳೊಂದಿಗೆ ಸ್ಥಾಪಿಸುವ ಘಟಕಗಳಿಗೆ ಬಂಡವಾಳ ಹೂಡಿಕೆಯ ಮೊತ್ತಕ್ಕೆ ಸರ್ಕಾರದ ಸಹಾಯಧನ ಶೇ.75 ಹಾಗೂ ಬ್ಯಾಂಕಿನ ಸಾಲಕ್ಕೆ ಬಡ್ಡಿ ಸಹಾಯಧನ ಶೇ.15 ಹೀಗೆ ಒಟ್ಟು ಶೇ. 90 ರಷ್ಟು ಸಹಾಯಧನ ನೀಡಲಾಗುತ್ತದೆ.

ಜವಳಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಿಚ್ಚಿಸುವ ಆಸಕ್ತ ಮಹಿಳಾ ಉದ್ದಿಮೆದಾರರು ಯೋಜನೆಯ ಸಂಪೂರ್ಣ ಮಾರ್ಗಸೂಚಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-262362 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version