ದಿನದ ಸುದ್ದಿ
ದಾವಣಗೆರೆ | ಮಳೆಯಿಂದ ಬೆಳೆಹಾನಿ : ರೈತರಿಗೆ ಪರಿಹಾರ ಒದಗಿಸುವಂತೆ ಜಿ.ಪಂ ಸದಸ್ಯ ಬಸಂತಪ್ಪ ಸರ್ಕಾರಕ್ಕೆ ಒತ್ತಾಯ
ಸುದ್ದಿದಿನ,ದಾವಣಗೆರೆ: ಸೋಮವಾರ ಭಾರೀಮಳೆ ಸುರಿದ ಹಿನ್ನೆಲೆಯಲ್ಲಿ ಮಾಯಕೊಂಡ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ ಜಿ.ಪಂ. ಸದಸ್ಯ ಬಸವಂತಪ್ಪ ಅವರು ರೈತರಿಗೆ ಸಾಂತ್ವನ ಹೇಳಿದರು.
ಗೋಣಿವಾಡ ಕ್ಯಾಂಪ್, ಮತ್ತಿ, ಕತ್ತಲಗೆರೆ ಕಾರಿಗನೂರು, ಹಲವು ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಬಾರಿ ಬಿರುಗಾಳಿ ಮತ್ತು ಮಳೆಯಿಂದ ಬಡವರ ಮನೆಗಳು, ದೇವಸ್ಥಾನ, ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತ ಬಹಳ ಹಾನಿಗೀಡಾಗಿರುವುದನ್ನು ತಿಳಿದ ರೈತರ ಸಮಸ್ಯೆಯನ್ನು ಆಲಿಸಿ ಧೈರ್ಯ ತುಂಬಿದರು.
ಈಗಾಗಲೇ ಲಾಕ್‌ಡೌನ್‌ನಿಂದ ರೈತರು ತಮ್ಮ ಫಸಲುಗಳಿಗೆ ಬೆಲೆ ಸಿಗದೇ ಇರುವುದರಿಂದ ಕಷ್ಟದಲ್ಲಿ ಸಿಲುಕಿದ್ದಾರೆ ಎಂದರು. ರೈತರ ಕಷ್ಟವನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ನೊಂದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸರ್ಕಾರವು ರೈತರ ಮೆಕ್ಕೆಜೋಳ, ಭತ್ತ ಇತರೆ ಫಸಲುಗಳನ್ನು ಖರೀದಿ ಮಾಡಲು ಅನೇಕ ನಿರ್ಬಂಧ ಹೇರಿರುತ್ತೀರಿ. ಆ ನಿರ್ಬಂಧಗಳನ್ನು ಸಡಿಲಗೊಳಿಸಿ ರೈತರು ಬೆಳೆದ ಮೆಕ್ಕೆಜೋಳ ಭತ್ತ, ಖರೀದಿ ಕೇಂದ್ರದ ಮುಖಾಂತರ ಖರೀದಿಸುವಂತೆ ಮತ್ತು ಖರೀದಿ ಕೇಂದ್ರದ ನೊಂದಣಿ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೋಣಿವಾಡ ಗ್ರಾಮದ ಮುಖಂಡರಾದ ಮುರುಗೇಂದ್ರಪ್ಪ, ಅಡಿಕೆ ತೋಟ ಹಾನಿಗೀಡಾದ ಮಂಜುನಾಥ್, ಪರಶುರಾಮ್ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243