ದಿನದ ಸುದ್ದಿ

ದಾವಣಗೆರೆ | ಬೌದ್ದಿಕ ಅಂಗವೈಕಲ್ಯ ಮಕ್ಕಳಿಗೆ ಟಿಎಲ್‍ಎಂ ಕಿಟ್ ವಿತರಣೆ : ಎಲ್ಲ ಮಕ್ಕಳಲ್ಲೂ ವಿಶೇಷತೆ ಇರುತ್ತದೆ : ಜಿ.ಪಂ ಅಧ್ಯಕ್ಷೆ ದೀಪಾ ಜಗದೀಶ್

Published

on

ಸುದ್ದಿದಿನ,ದಾವಣಗೆರೆ :ಎಲ್ಲ ಮಕ್ಕಳಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಪೋಷಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಹಾಗೂ ವಿಶೇಷ ಮಕ್ಕಳಿಗೆಂದೇ ಸರ್ಕಾರ ಒದಗಿಸಿರುವ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿಯರುವ ಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ(ಸಿಆರ್‍ಸಿ) ಜು.17 ರಂದು ಶುಕ್ರವಾರ ಏರ್ಪಡಿಸಲಾಗಿದ್ದ ಅಡಿಪ್ಸ್ ಯೋಜನೆಯಡಿ ಬೌದ್ದಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‍ಎಂ) ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅರ್ಹ ಮಕ್ಕಳಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದರು.

ಅನೇಕ ರೀತಿಯ ಬೌದ್ದಿಕ ಸಮಸ್ಯೆಗಳಿರುವ, ಅಂಗವೈಕಲ್ಯತೆ ಇರುವ ಮಕ್ಕಳಿಗೆ ತರಬೇತಿ, ಪುನರ್ವಸತಿ ಕಲ್ಪಿಸುತ್ತಿರುವ ಇಂತಹ ಒಂದು ಉತ್ತಮ ಕಾಂಪೋಸಿಟ್ ರೀಜನಲ್ ಸೆಂಟರ್(ಸಿಆರ್‍ಸಿ)ದಾವಣಗೆರೆಯಲ್ಲಿರುವುದು ಸಂತಸದ ವಿಚಾರವಾಗಿದ್ದು, ಇಂತಹ ಸಮಸ್ಯೆ ಇರುವ ಎಲ್ಲ ಮಕ್ಕಳಿಗೆ ಈ ಸೌಲಭ್ಯಗಳು ದೊರೆಯಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಾಕರ ಮತ್ತು ಸಹಯೋಗದಿಂದ ಕೆಲಸ ಮಾಡಿದಲ್ಲಿ ಎಲ್ಲ ಯೋಜನೆಗಳು ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಲಿವೆ ಎಂದರು.

ಸಿಆರ್‍ಸಿ ನಿರ್ದೇಶಕ ಡಾ.ಜ್ಞಾನವೇಲ್ ಮಾತನಾಡಿ, ಈ ಕೇಂದ್ರದಲ್ಲಿ ಬೌದ್ದಿಕ ಅಂಗವೈಕಲ್ಯ ಮತ್ತು ಇತರೆ ವಿಕಲಚೇತನ ಮಕ್ಕಳೊಂದಿಗೆ ಸಹನೆ, ಪ್ರೀತಿ ವಿಶ್ವಾಸದಿಂದ ಮನವೊಸಲಿಸಿ ತರಬೇತಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ. 1825 ಹೊಸಬರಿಗೆ ಮತ್ತು 112016 ಫಾಲೊ ಅಪ್ ಪ್ರಕರಣಗಳಲ್ಲಿ ಪುನರ್ವಸತಿ ಸೇವೆ ನೀಡಲಾಗಿದೆ.

ಅಡಿಪ್ ಯೋಜನೆಯಡಿ ಇದುವರೆಗೆ 492 ಟಿಎಲ್‍ಎಂ ಕಿಟ್ ವಿತರಣೆ ಮಾಡಲಾಗಿದೆ. 464 ಹಿಯರಿಂಗ್ ಏಡ್‍ಗಳನ್ನು ನೀಡಲಾಗಿದೆ. ಈ ಬಾರಿ ಒಟ್ಟು 87 ಬೌದ್ದಿಕ ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್‍ಗಳನ್ನು ನೀಡುವ ಗುರಿ ಹೊಂದಲಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮೊದಲನೇ ಹಂತದಲ್ಲಿ 7 ಜನರಿಗೆ ಟಿಎಲ್‍ಎಂ ವಿತರಣೆ ಮಾಡುವರು. ಉಳಿದ 80 ಟಿಎಲ್‍ಎಂಗಳನ್ನು ನಂತರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಿನಕ್ಕೆ 5 ರಿಂದ 10 ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಿಆರ್‍ಸಿ ರಿಹ್ಯಾಬಿಲಿಟೇಷನ್ ಅಧಿಕಾರಿ ಕನಗಸಭಾಪತಿ ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಜಿ.ಎಸ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಶೇಕ್ ಯಾಸಿನ್ ಶರೀಫ್, ರಾಜು ತಲಾಥೋಟಿ, ಆಡಳಿತಾಧಿಕಾರಿ ಪಂಕಜ್ ಸಿನ್ಹಾ, ಫಲಾನುಭವಿಗಳ ಪೋಷಕರು, ಇತರೆ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version