ದಿನದ ಸುದ್ದಿ
ದಾವಣಗೆರೆ | ಕಂಟೈನ್‍ಮೆಂಟ್ ವಲಯದ ನೋಟಿಫಿಕೇಷನ್
ಸುದ್ದಿದಿನ,ದಾವಣಗೆರೆ:ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 21681 ನೆಲೆಸಿದ್ದ ಕೊಟ್ಟೂರೇಶ್ವರ ಬಡವಣೆ, ನಿಟುವಳ್ಳಿ, ದಾವಣಗೆರೆ ಈ ಪ್ರದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ “ಕಂಟೈನ್‍ಮೆಂಟ್ ವಲಯ”ವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
ಜುಲೈ 5 ರ ಬೆಳಿಗ್ಗೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 21681 ನೆಲೆಸಿದ್ದ ಕೊಟ್ಟೂರೇಶ್ವರ ಬಡಾವಣೆ, ನಿಟುವಳ್ಳಿ, ದಾವಣಗೆರೆ ಮನೆಯ ಪೂರ್ವಕ್ಕೆ ಶ್ರೀ ದುರ್ಗಾ ನಿಲಯ ಸಂಖ್ಯೆ: 692/ಎ9, ಪಶ್ಚಿಮಕ್ಕೆ ಕೊಟ್ಟೂರೇಶ್ವರ ಬಡಾವಣೆ ರಸ್ತೆ, ಉತ್ತರಕ್ಕೆ ಪ್ರತಿಪಾಲ ಸದನ ನಿಲಯ, ದಕ್ಷಿಣಕ್ಕೆ ಗುರುರೇಖ ಕೃಪ 692/ಸಿ.
ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ಡಿಸಿಎಂ ಕಾಂಪೌಂಡ್, ಪಶ್ಚಿಮಕ್ಕೆ ಗಣೇಶ್ ಮಿಲ್ ಕಾಂಪೌಂಡ್, ದಕ್ಷಿಣ ಡಿಆರ್‍ಆರ್ ಹೈಸ್ಕೂಲ್ ಕಾಂಪೌಂಡ್, ದಕ್ಷಿಣಕ್ಕೆ ಚಿಕ್ಕಮ್ಮಣ್ಣಿ ಬಡಾವಣೆ ಈ ವ್ಯಾಪ್ತಿಯಲ್ಲಿದ್ದ 06 ಮನೆಗಳು, 30 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243