ದಿನದ ಸುದ್ದಿ
ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಅಗತ್ಯ – ಪತ್ರಕರ್ತ ಜಿ.ಎಂ.ಆರ್ ಆರಾಧ್ಯ
ಸುದ್ದಿದಿನ,ದಾವಣಗೆರೆ : ಜಾತಿ, ಮತ, ಧರ್ಮಗಳಿಗಿಂತಲೂ ನಾವು ಭಾರತೀಯರೆಂಬ ಅಭಿಮಾನವೇ ಶ್ರೇಷ್ಠ. ಭಾರತ ಜಗತ್ತಿಗೇ ಮಾದರಿಯಾದ ದೇಶವಾಗಿದೆ. ಇಂತಹ ದೇಶದ ಗೌರವ ಕಾಪಾಡುವುದು ವಿದ್ಯಾರ್ಥಿಗಳು ಮತ್ತು ಯುವಜನತೆಯ ಕರ್ತವ್ಯವಾಗಬೇಕು ಎಂದು ನಗರದ ಜನಮಿಡಿತ ಪತ್ರಿಕೆಯ ಸಂಪಾದಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಪತ್ರಕರ್ತರಾದ ಜಿ.ಎಂ.ಆರ್ ಆರಾಧ್ಯ ಹೇಳಿದರು.
ನಗರದ ವಿರಕ್ತಮಠದ ಆವರಣದಲ್ಲಿ ದಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಇಂದು ( ದಿ : 28/11/2018 ) ಬೆಳಗ್ಗೆ 11 ಗಂಟೆಗೆ ಆಯೋಜಿಲಾಗಿದ್ದ ಗೌರವ ಸನ್ಮಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ಅಕಾಡೆಮಿಯಿಂದ ನೀಡಲಾದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶ, ಭಾಷೆ, ಸಂಸ್ಕøತಿಯ ಹಿರಿಮೆ – ಗರಿಮೆ ಉಳಿಸುವ ನಿಟ್ಟಿನಲ್ಲಿ ಹಾಗೂ ದೇಶದ ಘನತೆ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಂಗಾಧರ ಬಿ.ಎಲ್ ನಿಟ್ಟೂರ್ ಅವರು ಸಂಸ್ಕøತಿಯ ಅರಿವು ಮತ್ತು ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡುತ್ತಾ, ನಮ್ಮ ನಾಡು-ನುಡಿ, ಭಾಷೆ, ಪರಂಪರೆ ಮತ್ತು ಸಂಸ್ಕøತಿಯ ಅರಿವು ಮೂಡಿಸಿ ಹೊಸ ಕಲಿಕೆಗೆ ಪ್ರೇರಣೆ ನೀಡುವುದೇ ಶ್ರೇಷ್ಠ ಶಿಕ್ಷಣ. ಪಠ್ಯಗಳು ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸಿ ಅವರಲ್ಲಿ ಉದಾತ್ತ ಚಿಂತನೆ ಮತ್ತು ಶ್ರೇಷ್ಠ ಸಂಸ್ಕಾರ ಬೆಳೆಸುವಂತಿರಬೇಕು ಎಂದರು.
ನಮ್ಮ ಅಕ್ಕಪಕ್ಕದಲ್ಲಿಯೇ ಸಾಕಷ್ಟು ಶ್ರಮಜೀವಿಗಳು ತಮ್ಮ ಜೀವನವನ್ನು ಅವಿರತ ಪರಿಶ್ರಮದಿಂದ ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ. ಅವರೇ ನಿಜವಾದ ಚಾಲೆಂಜಿಂಗ್ ಸಾರ್‍ಗಳು. ಅಂತಹ ಸಾಧಕರು ನಮಗೆ ಮಾದರಿಯಾಗಬೇಕು ಹೊರತು ಸಿನಿಮಾ ನಟರಲ್ಲ ಎಂದು ಕಿವಿಮಾತು ಹೇಳಿದರು.
ವನಿತ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕøತ ಶೈಲಜಾ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಶ್ರೀ ಬಸವಪ್ರಭು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ನಿರ್ದೇಶಕ ಬಿ.ಮಂಜುನಾಥ್ ವಹಿಸಿದ್ದರು. ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ ಕೊಟ್ರೇಶ್ ಪ್ರಾಸ್ತಾವಿಕ ನುಡಿಯಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಎಸ್‍ಜೆಎಂ ಶಾಲೆಯ 8 ರಿಂದ 10ನೇ ತರಗತಿಯ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401