ದಿನದ ಸುದ್ದಿ
ಕೆಟಿಜೆ ನಗರದಲ್ಲಿ ಪೊಲೀಸ್ ಉಪಠಾಣೆ ಮಾಡಲು ಮನವಿ
ಸುದ್ದಿದಿನ, ದಾವಣಗೆರೆ : ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು.
ಶನಿವಾರ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಸೋಮ್ಲಾಪುರದ ಹನುಮಂತಪ್ಪ , ಕೆಟಿಜೆ ನಗರದಲ್ಲಿ ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿದ್ದು ಇಲ್ಲಿ ಆನೇಕ ದೊಂಬಿ, ವ್ಯಾಜ್ಯಗಳು ನಡೆಯುತ್ತಿದೆ ಕೆಟಿಜೆ ನಗರದಲ್ಲಿ ಒಂದು ಪೊಲೀಸ್ ಉಪಠಾಣೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ದಲಿತ ಸಮಿತಿ ಅಧ್ಯಕ್ಷ ದುಗಪ್ಪ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಹಣ ಮಂಜೂರಾಗಿ 15 ವóರ್ಷವಾಯಿತು ನಾವು ಎಷ್ಟೇ ಮನವಿ ಮಾಡಿದರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಯಾರು ಅಧಿಕಾರಿಗಳು ಮುಂದಾಗುತ್ತಿಲ್ಲ.
ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರತಿನಿತ್ಯ ವಿದ್ಯಾರ್ಥಿಗಳು ಓಡಾಡಲು ಪರದಾಡುತ್ತಿದ್ದಾರೆ ಅಲ್ಲಿಗೆ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243