ದಿನದ ಸುದ್ದಿ

ದಾವಣಗೆರೆ | ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ..?

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿತರಣಾ ಕೇಂದ್ರದಿಂದ ಹೊರಡುವ ಎಸ್.ವಿ.ಟಿ 11 ಕೆ.ವಿ. ಫೀಡರ್‍ನಲ್ಲಿ ಮತ್ತು 220 ಕೆ.ವಿ. ಸ್ವೀಕರಣಾ ಕೇಂದ್ರ, ಎಸ್.ಆರ್.ಎಸ್ ದಾವಣಗೆರೆಯಿಂದ ಹೊರಡುವ ವಿವೇಕಾನಂದ ಫಿಡರ್‍ನಲ್ಲಿ ಬೆ.ವಿ.ಕಂ ವತಿಯಿಂದ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.24 ರಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ | ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಎಸ್.ವಿ.ಟಿ ಫೀಡರ್ ವ್ಯಾಪ್ತಿಯ ಡೆಂಟಲ್ ಕಾಲೇಜ್ ರಸ್ತೆ, ಎಮ್.ಸಿ.ಸಿ.ಬಿ. ಬಿ ಬ್ಲಾಕ್, ಆಂಜನೇಯ ಬಡಾವಣೆ, ಮಾಮಾಸ್ ಜಾಯಿಂಟ್‍ರಸ್ತೆ ಸುತ್ತ ಮುತ್ತ ಪ್ರದೇಶಗಳು, ಶ್ರೀನಿವಾಸನಗರ 1ನೇ ಕ್ರಾಸ್ ನಿಂದ 6ನೇ ಕ್ರಾಸ್ ವರೆಗೆ, ಆದಾಯ ತೆರಿಗೆ ಕಛೇರಿ, ಅನುಭವ ಮಂಟಪ ಶಾಲೆ, ನೀರಾವರಿ ಇಲಾಖೆ, ಗ್ರಾಮಾಂತರ ಪೊಲೀಸ್‍ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

Trending

Exit mobile version