ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ 17 ಮಿ.ಮೀ ಮಳೆ : ವಿವರ ಹೀಗಿದೆ
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಜು.29 ರಂದು 17.0 ಮೀ.ಮೀ ಮಳೆಯಾಗಿದ್ದು ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಮಳೆ ವಿವರ
- ಚನ್ನಗಿರಿಯಲ್ಲಿ ವಾಡಿಕೆ ಮಳೆ 4.0 ಮೀ.ಮೀ ಇದ್ದು 7.0 ಮೀ.ಮೀ ವಾಸ್ತವ ಮಳೆಯಾಗಿದೆ.
- ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 5.0 ಮೀ.ಮೀ ಇದ್ದು 13.0 ಮೀ.ಮೀ ವಾಸ್ತವ ಮಳೆಯಾಗಿದೆ.
- ಹರಿಹರದಲ್ಲಿ ವಾಡಿಕೆ ಮಳೆ 3.0 ಮಿ.ಮೀ ಇದ್ದು 7.0 ಮೀ.ಮೀ ವಾಸ್ತವ ಮಳೆಯಾಗಿದೆ.
- ಹೊನ್ನಾಳಿಯಲ್ಲಿ ವಾಡಿಕೆ ಮಳೆ 3.0 ಮೀ.ಮೀ ಇದ್ದು 11.0 ಮೀ.ಮೀ ವಾಸ್ತವ ಮಳೆಯಾಗಿದೆ.
- ಜಗಳೂರಿನಲ್ಲಿ ವಾಡಿಕೆ ಮಳೆ 1.0 ಮೀ.ಮೀ ಇದ್ದು 44.0 ಮೀ.ಮೀ ವಾಸ್ತವ ಮಳೆಯಾಗಿದೆ.
- ನ್ಯಾಮತಿಯಲ್ಲಿ ವಾಡಿಕೆ ಮಳೆ 5.0 ಮೀ.ಮೀ ಇದ್ದು 8.0 ಮೀ.ಮೀ ವಾಸ್ತವ ಮಳೆಯಾಗಿದೆ.
- ಜಿಲ್ಲೆಯಲ್ಲಿ ಒಟ್ಟು ಸರಾಸರಿ ವಾಡಿಕೆ 4.0 ಮಿ.ಮೀ ಇದ್ದು ವಾಸ್ತವ ಮಳೆ 17.0 ಮಿ.ಮೀ ಆಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 4 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ಅಂದಾಜು ರೂ.20,800 ನಷ್ಟ ಸಂಭವಿಸಿರುತ್ತದೆ. ಹಾಗೂ 4 ಎಕರೆ ಮೆಕ್ಕೆ ಜೋ¼ದ ಬೆಳೆ ಹಾನಿಯಾಗಿದ್ದು 60,000 ನಷ್ಟ ಸಂಭವಿಸಿರುತ್ತದೆ ಒಟ್ಟು ರೂ. 80,800 ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕಿನಲ್ಲಿ 1 ಎಕರೆ ಮೆಕ್ಕೆ ಜೋಳದ ಬೆಳೆ ಹಾನಿಯಾಗಿದ್ದು ರೂ.30,000 ನಷ್ಟ ಸಂಭವಿಸಿರುತ್ತದೆ.
ಜಗಳೂರು ತಾಲ್ಲೂಕಿನಲ್ಲಿ 12 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ 80,000 ಹಾಗೂ 35 ಎಕರೆ ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆ ಹಾನಿಯಾಗಿದ್ದು ರೂ 1.20 ಲಕ್ಷ ನಷ್ಟ ಸೇರಿದಂತೆ ಒಟ್ಟು ರೂ. 2 ಲಕ್ಷ ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು ರೂ. 3,10,800 ಲಕ್ಷ ನಷ್ಟ ಸಂಭವಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243