ದಿನದ ಸುದ್ದಿ

ದಾವಣಗೆರೆ | ಮಳೆ ವಿವರ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ :ಜಿಲ್ಲೆಯಲ್ಲಿ ಏಪ್ರಿಲ್ 22 ರಂದು ಸರಾಸರಿ 12.15 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ 5.05 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 14.16 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆಯಲ್ಲಿ 5.58 ಮಿ.ಮೀ, ಹರಿಹರದಲ್ಲಿ 20.82 ಮಿ.ಮೀ, ಹೊನ್ನಾಳಿಯಲ್ಲಿ 17.1 ಮಿ.ಮೀ ಹಾಗೂ ಜಗಳೂರಿನಲ್ಲಿ 3.1 ಮಿ.ಮೀ ವಾಸ್ತವ ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ 12.15 ಮಿ.ಮೀ ಮಳೆಯಾಗಿದೆ.

ಮಳೆಯಿಂದಾಗಿ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 01 ಪಕ್ಕಾ ಮನೆ ಮತ್ತು 01 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ಅಂದಾಜು ರೂ.40 ಸಾವಿರ ನಷ್ಟ ಸಂಭವಿಸಿದೆ. ಹಾಗೂ 50 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು ರೂ.4 ಲಕ್ಷ ಹಾನಿಯಾಗಿದ್ದು ತಾಲ್ಲೂಕಿನಲ್ಲಿ ಒಟ್ಟಾರೆ ರೂ.4.40 ಲಕ್ಷ ಸಂಭವಿಸಿದೆ.

ಇದನ್ನೂ ಓದಿ | ಪಂಡರಹಳ್ಳಿ ಹಾಗೂ ದುಮ್ಮಿಯಲ್ಲಿ ಜಾತ್ರೆ ಮಾಡಿದವರ ಮೇಲೆ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಕೇರಿ 

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 01 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ.50 ಸಾವಿರ ನಷ್ಟ ಸಂಭವಿಸಿರುತ್ತದೆ. 01 ಜಾನುವಾರು ಜೀವ ಹಾನಿಯಾಗಿದ್ದು ರೂ.15 ಸಾವಿರ ನಷ್ಟ ಸಂಭವಿಸಿದ್ದು ತಾಲ್ಲೂಕಿನಲ್ಲಿ ಒಟ್ಟಾರೆ ರೂ. 65 ಸಾವಿರ ಸಂಭವಿಸಿರುತ್ತದೆ

ಜಿಲ್ಲೆಯಲ್ಲಿ ಒಟ್ಟಾರೆ ರೂ.5.05 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version