ದಿನದ ಸುದ್ದಿ

ದಾವಣಗೆರೆ | ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೀಜ ಬಿತ್ತನೆ ಅಭಿಯಾನ

Published

on

ಸುದ್ದಿದಿನ,ದಾವಣಗೆರೆ : 2022-23ನೇ ಸಾಲಿಗೆ ಅರಣ್ಯ ಇಲಾಖಾ ವತಿಯಿಂದ ಹಸಿರು ಕರ್ನಾಟಕ ಕಾರ್ಯಕ್ರಮದ ಭಾಗವಾಗಿ ದಾವಣಗೆರೆ ವಿಭಾಗದ ಎಲ್ಲಾ ಪ್ರಾದೇಶಿಕ ವಲಯಗಳಲ್ಲಿ ಜೂ.05 ರಿಂದ ಜೂ.12 ರವರೆಗೆ ಬೀಜ ಬಿತ್ತನೆ ಅಭಿಯಾನ-2022-23 ಮತ್ತು ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ/ಕಾಲೇಜು ಮಕ್ಕಳೊಂದಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಬೀಜ ಬಿತ್ತನೆ ಅಭಿಯಾನವನ್ನು ದಾವಣಗೆರೆ ಪ್ರಾದೇಶಿಕ ವಿಭಾಗದ ವಲಯಗಳಾದ ದಾವಣಗೆರೆ ವಲಯದಲ್ಲಿ 05 ಪ್ರದೇಶಗಳಲ್ಲಿ, ಜಗಳೂರು ವಲಯದಲ್ಲಿ 04 ಅರಣ್ಯ ಪ್ರದೇಶಗಳಲ್ಲಿ, ಹರಪನಹಳ್ಳಿ ವಲಯದಲ್ಲಿ 06, ಹೊನ್ನಾಳಿ ವಲಯದಲ್ಲಿ 08 ಹಾಗೂ ರಂಗಯ್ಯನದುರ್ಗ ವನ್ಯಜೀವಿ ವಲಯದಲ್ಲಿ 01 ವಿವಿಧ ಸ್ಥಳೀಯ ಜಾತಿಯ ಉತ್ತಮ ಗುಣಮಟ್ಟದ 2900 ಕೆ.ಜಿ ಯಷ್ಟು ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version