ದಿನದ ಸುದ್ದಿ

ಮಾಸ್ಕ್ ಹಾಕದವರ ಮೇಲೆ ಶಿಸ್ತು ಕ್ರಮ : ಎಸ್ಪಿ ಹನುಮಂತರಾಯ

Published

on

ಸುದ್ದಿದಿನ, ದಾವಣಗೆರೆ : ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಎಲ್ಲರೂ ಸಹಕರಿಸಬೇಕು. ಯಾರೂ ಕೂಡ ಅನಾವಶ್ಯಕವಾಗಿ ಹೊರಗೆ ಬರಬಾರದು. ಅಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಸೂಚಿಸಿದರು.

ಕೊರೊನಾದಿಂದ ಗುಣಮುಖರಾದ ಮೂವರನ್ನು ಬುಧವಾರ ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಜೊತೆಗೆ ಸರ್ಕಾರದ ನಿಯಮದಂತೆ ನಗರದಲ್ಲಿ ಸಂಚರಿಸಲು ಅನುವು ಮಾಡಕೊಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರೊಬ್ಬರು ಗುಂಪು ಕಟ್ಟಿಕೊಂಡು ನಿಲ್ಲಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ಮಾಸ್ಕ್ ಹಾಕಿಕೊಂಡು ಓಡಾಡಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಾದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version