ದಿನದ ಸುದ್ದಿ

ಅನಧಿಕೃತ ಮದ್ಯದಂಗಡಿಗಳ ತೆರವಿಗೆ ಕ್ರಮ : ಎಸ್.ಪಿ ಹನುಮಂತರಾಯ

Published

on

ಸುದ್ದಿದಿನ ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆಯಲ್ಲಿ ವಿವಿಧ ತಾಲೂಕುಗಳು ಹಲವು ಮುಖಂಡರು ನಾವುಗಳು ತಾಲೂಕುಗಳಿಂದ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಬರುವುದು ಕಷ್ಟವಾಗುತ್ತದೆ ಹಾಗೂ ಅತಿಹೆಚ್ಚು ಜನ ಸೇರುವುದರಿಂದ ನಮ್ಮ ಸಮಸ್ಯೆಗಳು ಬಗ್ಗೆ ವಿಸೃತ್ತವಾಗಿ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಎಸ್.ಪಿಯವರು ಉಪವಿಭಾಗ ಮಟ್ಟದಲ್ಲಿ ಸಭೆ ನಡೆಸುವುದರಿಂದ ನಿಮ್ಮ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಹಾಗೂ 13 ಇ.ಆರ್.ಎಸ್‍ಎಸ್ ವಾಹನಗಳು ತೊಂದರೆಯಲ್ಲಿರುವವರಿಗೆ ತಕ್ಷಣ ಸ್ಪಂದನೆ ನೀಡಲಿದ್ದು ರಾಜ್ಯದಲ್ಲಿ ಈ ಯೋಜನೆಯನ್ನು 3 ಜಿಲ್ಲೆಗಳ ಪೈಲೆಟ್ ಯೋಜನೆಯಾಗಿ ಜಾರಿಗೆ ತರಲಾಗುತ್ತಿದೆ ಬಾಗಲಕೋಟೆ, ಹಾವೇರಿ, ಹಾಗೂ ದಾವಣಗೆರೆ ಜಿಲ್ಲೆಗಳು ಈ ಯೋಜನೆಯಲ್ಲಿ ಆಯ್ಕೆಯಾಗಿದ್ದು ಔಟ್ ಪೋಸ್ಟ್‍ಗಳ ಬೇಡಿಕೆಗೂ ಸ್ಪಂದನೆ ದೊರೆಯಲಿದೆ ಎಂದರು.

ಸಾರ್ವಜನಿಕರು ಹಾಗೂ ದಲಿತ ಮುಖಂಡರ ಸಹಭಾಗಿತ್ವದಲ್ಲಿ ಅನಧಿಕೃತ ಮದ್ಯದಂಗಡಿಗಳ ತೆರವಿಗೆ ನಾವು ಕ್ರಮ ವಹಿಸುತ್ತೇವೆ ಅಕ್ರಮ ಗೋ ಸಾಗಾಟದ ಬಗ್ಗೆ ನಮಗೆ ದೂರು ಬಂದಿತ್ತು ನಮ್ಮ ಸಿಬ್ಬಂದಿಗಳು ಎಸ್‍ಆರ್‍ವಿ ಕ್ಯಾಂಪ್‍ನಲ್ಲಿ ಕಾರ್ಯಚರಣೆ ನಡೆಸಿ 77 ಗೋವುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version