ದಿನದ ಸುದ್ದಿ

ದಾವಣಗೆರೆ | ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಅಣಜಿ ಹೋಬಳಿ ಗುಡಾಳು ವೃತ್ತದ ಗ್ರಾಮಸಹಾಯಕರ ಹುದ್ದೆಯು ಖಾಲಿ ಇದ್ದು, ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳವರು ಅಗತ್ಯ ದಾಖಲಾತಿಗಳ ವಿವರಗಳನ್ನು ಜುಲೈ.11 ರ ಸಂಜೆ 5.30 ಗಂಟೆ ಯೊಳಗೆ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು, ನಿಗದಿತ ದಿನಾಂಕದ ನಂತರ ಸ್ವೀಕೃತಿಯಾಗುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಹತೆಗಳು

ಓದಲು ಹಾಗೂ ಬರೆಯಲು ಚೆನ್ನಾಗಿ ಬಲ್ಲವರಾಗಿರಬೇಕು. ಅರ್ಜಿದಾರರಿಗೆ ಕನಿಷ್ಟ 25 ವರ್ಷ ವಯಸ್ಸಾಗಿರಬೇಕು. ಆರ್ಜಿದಾರರು ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಯ ವೃತ್ತದ ನಿವಾಸಿಯಾಗಿರಬೇಕು ಮತ್ತು ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು. ಗ್ರಾಮಸಹಾಯಕ, ತಳವಾರರು, ತೋಟಿಗಳು, ನೀರುಗಂಟಿಗಳು, ವಾಲಿಕರ್ಸ್, ಮಹರ್ಸ್, ಬಾರಿಕರ್ಸ್, ನೀರಾಡಿಗಳು, ಬಲೂತಿದಾರ್ಸ್, ತಳಯಾರಿಸ್, ವೆಟಿಸ್, ಕುಲುವಡಿಸ್, ಉರ್‍ಗಾನಿಸ್ ಕುಟುಂಬದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version