ದಿನದ ಸುದ್ದಿ

ದಾವಣಗೆರೆ | ಯಮ ಕಿಂಕರರೊಂದಿಗೆ ಸಂಚಾರಿ ನಿಯಮ ಜಾಗೃತಿ ಮೂಡಿಸಿದ ಯಮ ಧರ್ಮರಾಯ

Published

on

ಸುದ್ದಿದಿನ,ದಾವಣಗೆರೆ : ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ದಕ್ಷಿಣ ಸಂಚಾರ ಪೊಲೀಸ್ ಠಾಣೆ, ದಾವಣಗೆರೆ ಇವರ ವತಿಯಿಂದ ಸಾರ್ವಜನಿಕರಿಗೆ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲು “ಎಚ್ಚರಿಕೆ ರಸ್ತೆಗೆ ಇಳಿದ ಯಮ-ಕಿಂಕರರು ಇವರಿಂದ ಪಾರಾಗಲು ಸಂಚಾರ ನಿಯಮಗಳ ಪಾಲನೆಯೇ ಪರಿಹಾರ ಮಾರ್ಗ” ಎಂಬ ಘೋಷವಾಕ್ಯದಡಿ ಕಾರ್ಯಕ್ರಮವನ್ನು ಜ.17 ರಂದು ನಗರದ ಜಯದೇವ ವೃತ್ತ ಹಾಗೂ ಡೆಂಟಲ್ ಕಾಲೇಜು ರಸ್ತೆಯಲ್ಲಿ ಆಯೋಜಿಸಲಾಗಿತ್ತು.

ಜಾಗೃತಿ ಕಾರ್ಯಕ್ರಮದಲ್ಲಿ ಟ್ರಾಫಿಕ್ ಪೊಲೀಸರು ಯಮ ಮತ್ತು ಕಿಂಕರ ವೇಷಧಾರಿಗಳಾಗಿ ವಾಹನ ಚಾಲಕರನ್ನು ನಿಲ್ಲಿಸಿ ನೀವು ಹೆಲ್ಮೆಟ್ ಧರಿಸಿಲ್ಲ. ವಾಹನದ ಚಾಲನೆ ವೇಳೆ ಮೊಬೈಲ್‍ನಲ್ಲಿ ಮಾತನಾಡುತ್ತೀರಾ? ಸರ್ಕಾರ ಹೆಚ್ಚು ದಂಡ ವಿಧಿಸಿದರೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತೀರ, ಇದರಿಂದ ಸಾವು ಸಂಭವಿಸುತ್ತದೆ.

ನಿಮ್ಮನ್ನು ನಮ್ಮ ಯಮಲೋಕಕ್ಕೆ ಕರೆದುಕೊಂಡು ಹೋಗಿ ಘೋರ ಶಿಕ್ಷೆ ನೀಡುತ್ತೇವೆ. ಭೂಲೋಕದಲ್ಲಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ನೀವು ಪಾಲನೆ ಮಾಡುತ್ತಿಲ್ಲ ದೂರಿದ ಅವರು ಸಂಚಾರಿ ನಿಯಮಗಳ ಪಾಲನೆ ಬಗ್ಗೆ ವಾಹನ ಸಂಚಾರರಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಗಳಾದ ಮಂಜುನಾಥ್ ಲಿಂಗಾರೆಡ್ಡಿ, ಎಎಸ್‍ಐ ಜಯಶೀಲ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version