ದಿನದ ಸುದ್ದಿ
ಯುಜಿಸಿ ಸ್ಟಾರ್ಟ್ ಅಪ್ ಗ್ರ್ಯಾಂಟ್‌ಗೆ ದಾವಣಗೆರೆ ವಿವಿಯ ಮೂವರು ಪ್ರಾಧ್ಯಾಪಕರು ಆಯ್ಕೆ
ಸುದ್ದಿದಿನ,ದಾವಣಗೆರೆ:ಯುಜಿಸಿ ಸ್ಟಾರ್ಟ್ ಅಪ್ ಗ್ರ್ಯಾಂಟ್‌ಗೆ ದಾವಣಗೆರೆ ವಿಶ್ವವಿದ್ಯಾಲಯದ 3 ಬೋಧಕ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಭೌತ ವಿಜ್ಞಾನ ವಿಭಾಗದ ಡಾ.ಪ್ರಸನ್ನ ಜಿ.ಡಿ.ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಚಂದ್ರಶೇಖರ್ ಎಸ್, ಪ್ರಾಣಿವಿಜ್ಞಾನ ವಿಭಾಗದ ಡಾ.ಅಂಬರೀಶ್ ಛಬ್ಬಿ ಆಯ್ಕೆಯಾಗಿದ್ದು, ಇವರಿಗೆ ತಲಾ 10 ಲಕ್ಷ ಯುಜಿಸಿ ಅನುದಾನ ಸಿಗಲಿದೆ.
ಭಾರತದ 34 ಮಂದಿ ಈ ಅನುದಾನಕ್ಕೆ ಆಯ್ಕೆಯಾಗಿದ್ದು, ರಾಜ್ಯದಲ್ಲೇ ದಾವಣಗೆರೆ ವಿವಿಯಿಂದ ಈ ಮೂವರು ಆಯ್ಕೆಯಾಗಿದ್ದಾರೆ ಎಂದು ಕುಲಸಚಿವ ಬಸವರಾಜ ಬಣಕಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243