ದಿನದ ಸುದ್ದಿ
ದಾವಣಗೆರೆ ವಿವಿ | ಪರೀಕ್ಷಾ ಅಕ್ರಮ ತಡೆಯಲು ವಿಶೇಷ ಮುತುವರ್ಜಿ
ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯ ಮೇ/ಜೂನ್ 2019ನೇ ಸಾಲಿನ ಪರೀಕ್ಷೆಗಳು 10.05.2019ರಿಂದ ಪ್ರಾರಂಭವಾಗಿದ್ದು, ಸ್ನಾತಕ ಪದವಿಗಳಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಸೆಮಿಸ್ಟರ್ ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ.
ಪರೀಕ್ಷೆಗಳು ಸುಗಮವಾಗಿ ಸಾಗಿಸುವುದಕ್ಕೆ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿಯೂ ತಲಾ ಒಬ್ಬರು ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೊಡ್ಡ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ವೀಕ್ಷಕರಾಗಿ ಇರುತ್ತಾರೆ. ಪರೀಕ್ಷಾ ಅಕ್ರಮವನ್ನು ನಿಯಂತ್ರಣದಲ್ಲಿಡಲು ವಿಶೇಷ ಮುತುವರ್ಜಿ ವಹಿಸಲಾಗಿದೆ. ಮೇಲಿಂದ ಮೇಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲು ಅಕ್ರಮ ಜಾಗೃತದಳದ ಸಿಬ್ಬಂದಿಗಳು ನೇಮಕಗೊಳಿಸಲಾಗಿದೆ.
ಪರೀಕ್ಷೆಗಳು 16.06.2019 ರವರೆಗೆ ನಡೆಯುತ್ತದೆ. ಹೆಚ್ಚಿನ ಪರೀಕ್ಷಾ ಅಕ್ರಮಗಳಿಗೆ ಅಸ್ಪದ ನೀಡದೆ ವಿದ್ಯಾರ್ಥಿಗಳು ಚೆನ್ನಾಗಿ ಪರೀಕ್ಷೆ ಬರೆಯಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರು(ಪರೀಕ್ಷಾಂಗ)ಡಾ.ಬಸವರಾಜ ಬಣಕಾರ ಇವರು ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243