ದಿನದ ಸುದ್ದಿ

ದಾವಣಗೆರೆ | ಕೋಮು ದ್ವೇಷ ವಿಡಿಯೋ ವೈರಲ್ : 3 ಪ್ರಕರಣ ದಾಖಲು

Published

on

ಸುದ್ದಿದಿನ, ದಾವಣಗೆರೆ : ರಂಜಾನ್ ವೇಳೆ ಅನ್ಯ ಕೋಮಿನ ನಗರ ಚನ್ನಬಸಪ್ಪ ಅಂಗಡಿಯಲ್ಲಿ ಬಟ್ಟೆ ಖರೀದಿಸಬಾರದೆಂಬ ಮುಸ್ಲಿಂ ಬಾಂಧವರ ವಿಡಿಯೋ ವೈರಲ್ ಆದ ಹಿನ್ನೆಲೆ ಕೆಟಿಜೆ ನಗರ, ಬಸವನಗರ ಮತ್ತು ಹರಿಹರದಲ್ಲಿ ಒಟ್ಟು 3 ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಹೇಳಿದರು.

ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇ 17 ರಂದು ಮುಸ್ಲಿಂ ಧರ್ಮದ ಮುಖಂಡರೊಂದಿಗೆ ಶಾಂತಿ ಸಭೆ ಸಹ ನಡೆಸಲಾಗಿದ್ದು, ಮುಖಂಡರು ಈ ಬಾರಿ ಕೋವಿಡ್ ಹಿನ್ನೆಲೆ ಅನ್ಯ ಧರ್ಮದವರಂತೆ ರಂಜಾನ್ ಆಚರಣೆಯನ್ನು ಸರಳವಾಗಿ ಆಚರಿಸುವಂತೆ ಸಮಾಜದಲ್ಲಿ ಕರೆ ನೀಡಲಾಗಿದೆ. ಆದರೆ ಕೆಲವು ಯುವಕರು ಈ ರೀತಿ ಅನ್ಯ ಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಬಾರದೆಂಬ ಸಂದೇಶವನ್ನು ಹರಡಿದ್ದಾರೆ ಎಂದರು.

ಇಂತಹ ಸಂದೇಶಗಳ ವಿರುದ್ದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಹೀಗೆ ಅನಾವಶ್ಯಕವಾದ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವವರೂ ಸಹ ಒಮ್ಮೆ ಯೋಚಿಸಬೇಕು. ಇವರ ವಿರುದ್ದ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version