ಕ್ರೀಡೆ
ದಾವಣಗೆರೆ ‘ಕುಸ್ತಿಪಟು ವಿಕಾಸ ಗೌಡ’ ನಿಧನ
ಸುದ್ದಿದಿನ, ದಾವಣಗೆರೆ| ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದ ಕುಸ್ತಿ ಪಟು ವಿಕಾಸ್ ಗೌಡ (20) ಸಾವನ್ನಪ್ಪಿದ್ದಾರೆ.
ನಗರದ ಕ್ರೀಡಾ ನಿಲಯದಲ್ಲಿ ನಾಲ್ಕು ವರ್ಷದಿಂದ ತರಬೇತಿ ಪಡೆಯುತ್ತಿದ್ದ ಇವರು ಮೈಸೂರು ಜಿಲ್ಲೆಯ ಸೀತಾಪುರ ಗ್ರಾಮದವರು. ರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಹೆಸರು ಮಾಡಿದ ಕ್ರೀಡಾ ಪಟು ಇವರು. ಬೆನ್ನು ಹುರಿಗೆ ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ (ಆಗಸ್ಟ್ 1) ಇಂದು ಸಾವನ್ನಪ್ಪಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401