ರಾಜಕೀಯ

ಹೊನ್ನಾಳಿ ಕ್ಷೇತ್ರದ ಜನರು ಅದೃಷ್ಟವಂತರು : ಡಿಸಿಎಂ ಅಶ್ವಥ್ ನಾರಾಯಣ

Published

on

ಸುದ್ದಿದಿನ, ದಾವಣಗೆರೆ:ಹೊನ್ನಾಳಿ ಕ್ಷೇತ್ರದ ಜನರು ಅದೃಷ್ಟವಂತರು. ರೇಣುಕಾಚಾರ್ಯ ಅವರು ಜನರ ಧ್ವನಿಯಾಗಿ, ಜನಪ್ರತಿನಿಧಿ ಸ್ಥಾನದದೊಂದಿಗೆ ಜನರ ಕೆಲಸ ಮಾಡುವ ಮೂಲಕ ಇತರರಿಗೂ ಪ್ರೇರಕವಾಗಿರುವುದು ಹೆಮ್ಮೆಯ ವಿಷಯ. ಜನರು ಕೊಟ್ಟಂತಹ ಅವಕಾಶದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಶ್ಲಾಘೀಸಿದರು.

ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಅವರು ಶನಿವಾರ ಮಾತನಾಡಿ, ಯಾವ ಕ್ಷೇತ್ರದಲ್ಲಿಯು ಯಾವ ಶಾಸಕರು ಕೆಲಸ ಮಾಡದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಇರಲಿ, ಇಲ್ಲದಿರಲಿ ಕ್ಷೇತ್ರಕ್ಕೆ ಬೇಕಾದ ಎಲ್ಲ ಕಾಮಗಾರಿ ಹಾಗೂ ಕೆಲಸಗಳನ್ನು ಸರ್ಕಾರದಿಂದ ಪಡೆದುಕೊಂಡು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿಸುತ್ತಿರುವ ವ್ಯಕ್ತಿಯೆಂದರೆ ಅದು ಶಾಸಕ ರೇಣಕಾಚಾರ್ಯ ಅವರು ಎಂದು ಹೇಳಿದರೆ ತಪ್ಪಾಗದು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಕೊಡುಗೆ ದೊಡ್ಡದು

ದಾವಣಗೆರೆ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದೆ. ಉನ್ನತ ಶಿಕ್ಷಣ ಸಚಿವನಾಗಿ ಸಿಎಂ ಯಡಿಯೂರಪ್ಪನವರ ನಾಯಕತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. 1968 ಹಾಗೂ 1986 ರಲ್ಲಿ ಈ ಹಿಂದೆ ಶಿಕ್ಷಣ ನೀತಿ ತರಲಾಗಿತ್ತು. ಅದರಂತೆ ಇದೀಗ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಇದರ ಶ್ರೇಯ ಪ್ರಧಾನ ಮಂತ್ರಿ ಅವರಿಗೆ ಸಲ್ಲುತ್ತದೆ. ಈ ಶಿಕ್ಷಣ ನೀತಿಗೆ ಕಾರ್ಯ ರೂಪ ಕೊಟ್ಟವರು ರಾಜ್ಯದ ಡಾ.ಕಸ್ತೂರಿ ರಂಗನ್ ಅವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಲು ರಾಜ್ಯವು ಕಾರಣವಾಗಿದ್ದು, ನಮ್ಮ ಮೇಲೆ ತುಂಬಾ ಜವಾಬ್ದಾರಿ ಇದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version