ರಾಜಕೀಯ
ವಿಡಿಯೋ | ಜೆಡಿಎಸ್ ಗೆ 12 ಸೀಟು ಅನ್ನೋದು ಮಾಧ್ಯಮದವರ ಸೃಷ್ಟಿ ; ಸೀಟು ಹಂಚಿಕೆ ಫೈನಲ್ ಆಗಿಲ್ಲ : ಜಿ. ಪರಮೇಶ್ವರ್
ಸುದ್ದಿದಿನ,ದಾವಣಗೆರೆ : ಲೋಕಸಭಾ ಚುನಾವಣೆ ಯಲ್ಲಿ ಸೀಟು ಹಂಚಿಕೆ ಕುರಿತಂತೆ ಇಂದು ಜೆಡಿಎಸ್ ವರಿಷ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನೆಡಸಿ ಅಂತಿಮತೀರ್ಮಾನಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ತಯಾರಿ ಮಾಡಿಕೊಳ್ಳಲಾಗಿದೆ. ಸಮ್ಮಿಶ್ರ ಸರ್ಕಾರ ಇರುವ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಗೂ ಒಟ್ಟಾಗಿ ಹೋಗುವುದಾಗಿ ತಿಳಿಸದರು.
ಕಾಂಗ್ರೆಸ್ – ಜೆಡಿಎಸ್ ಮಧ್ಯೆ ಸೀಟುಗಳ ಹಂಚಿಕೆ ಆಗಬೇಕಿದೆ .ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಮಾತು ಕತೆ ನಡೆದಿದೆ. ನಾನು ಮತ್ತು ದಿನೇಶ್ ಗುಂಡೂರಾವ್ ಜೆಡಿಎಸ್ ವರಿಷ್ಠರ ಜೊತೆ ಪ್ರಾಥಮಿಕ ಸಭೆ ನಡೆಸಲಿದ್ದೇವೆ. ಜೆಡಿಎಸ್ ಎಷ್ಟು ಸೀಟ್ ಕೇಳುತ್ತದೆ ಅನ್ನುವುದರ ಮೇಲೆ ಇಲ್ಲಿಯೇ ಸಮಸ್ಯೆ ಪರಿಹರಿಸಿಕೊಳ್ಳಲಿದ್ದೇವೆ. ಜೆಡಿಎಸ್ 12 ಸೀಟು ಕೇಳ್ತಾ ಇದೆ ಅನ್ನೋದು ಮಾಧ್ಯಮದವರ ಸೃಷ್ಟಿ ಎಂದರು.
ಯಾರಿಗೆ ಎಷ್ಟು ಸೀಟು ಎನ್ನುವುದು
ಇನ್ನೂ ಅಂತಿಮ ಆಗಿಲ್ಲ. ಈ ಕುರಿತು ರಾಜ್ಯದ ಕಾಂಗ್ರಸ್ ಮುಖಂಡರು, ಜೆಡಿಎಸ್ ಮುಖಂಡರು ಕುಳಿತು ಮಾತನಾಡುತ್ತೇವೆ ಎಂದರು.ಬೆಂಗಳೂರಿನಲ್ಲಿ ಏರ್ ಶೋ ವೇಳೆ ಅಗ್ನಿ ದುರಂತ ದುರದೃಷ್ಟಕರ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಯಾವ ಕಾರಣಕ್ಕಾಗಿ ಅಗ್ನಿ ದುರಂತ ನಡೆದಿದೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಆಪರೇಷನ್ ಕಮಲ ಆಡಿಯೋ ಪ್ರಕರಣ ಎಸ್ಐಟಿ ತನಿಖೆಗೆ ಈಗಾಗಲೇ ನಿರ್ಧರಿಸಲಾಗಿದೆ
ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.ಶೀಘ್ರದಲ್ಲಿಯೇ ಎಸ್ ಐ ಟಿ ನೇಮಕವಾಗಲಿದೆ. ಸಿಎಂ ಕುಮಾರಸ್ವಾಮಿ ಎಸ್ಐಟಿ ತನಿಖೆಗೆ ಹಿಂದೇಟು ಹಾಕುತ್ತಿಲ್ಲ, ಶೀಘ್ರದಲ್ಲೇ ಎಸ್ಐಟಿ ತನಿಖಾಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದರು.
ನಾನಾಗಲಿ, ನನ್ನ ಸಿಬ್ಬಂದಿಯಾಗಲಿ ಇಂತಹದ್ದೇ ರಕ್ಷಣೆ ಕೊಡಿ ಎಂದು ಕೇಳಿಲ್ಲ. ಡಿಪಿಆರ್ ಪ್ರಕಾರ ಸೆಕ್ಯೂರಿಟಿ ನೀಡಲಾಗಿದೆ.ಶಿಷ್ಟಾಚಾರದ ಪ್ರಕಾರ ಸೆಕ್ಯೂರಿಟಿ ಕೊಟ್ಟಿದ್ದಾರೆ ಹೊರತು ನನಗೆ ಯಾವುದೇ ಪ್ರಾಣ ಬೆದರಿಕೆ ಇಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401