ದಿನದ ಸುದ್ದಿ

ದಾವಣಗೆರೆ | ಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ

Published

on

ಸುದ್ದಿದಿನ,ದಾವಣಗೆರೆ :ಕೋವಿಡ್-19(ಕೊರೋನಾ) ವೈರಸ್ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಘನತೆ ಪೂರ್ವ ಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವಕ್ಪ್ ಮಂಡಳಿ ಎಚ್ಚರಿಸಿದೆ.

ರಾಜ್ಯದ ಹಲವೆಡೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾದ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ ನೀಡಲು ನಿರಾಕರಿಸುತ್ತಿರುವ, ಅನಗತ್ಯ ಕಿರುಕುಳ ನೀಡುತ್ತಿರುವ ವರದಿಗಳು ಬಂದಿವೆ. ಘನತೆಪೂರ್ಣ ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಈ ಹಕ್ಕಿಗೆ ಚ್ಯುತಿಯನ್ನುಂಟು ಮಾಡಲು ಯಾರಿಗೂ ಅವಕಾಶವಿಲ್ಲ.

ಹಾಗಾಗಿ ಇನ್ನು ಮುಂದೆ ಜಿಲ್ಲೆಯ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ತೊಂದರೆ ಉಂಟು ಮಾಡುವ ಸ್ಥಳ ನಿರಾಕರಿಸುವ ಯಾವುದೇ ವ್ಯಕ್ತಿ ಅಥವಾ ವಕ್ಪ್ ಅಥವಾ ವಕ್ಪ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿ/ಮುತವಲ್ಲಿ/ಆಡಳಿತಾಧಿಕಾರಿಯವರ ವಿರುದ್ದ ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯು ವಕ್ಫ್ ಕಾಯ್ದೆ 1995 ಹಾಗೂ ಭಾರತ ದಂಡ ಸಂಹಿತೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version