ದಿನದ ಸುದ್ದಿ

ದಾವಣಗೆರೆ : ವಿದ್ಯುತ್ ಸ್ಪರ್ಶಿಸಿ ಪತ್ರಕರ್ತ ವಿಜಯಕುಮಾರ್ ಸಾವು

Published

on

ಸುದ್ದಿದಿನ,ದಾವಣಗೆರೆ : ವಿದ್ಯುತ್ ಸ್ಪರ್ಶಿಸಿ ಪತ್ರಕರ್ತ ವಿಜಯಕುಮಾರ (28) ಸಾವನ್ನಪ್ಪಿದ ಘಟನೆದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉದಯವಾಣಿ ಪತ್ರಿಕೆಯ ದಾವಣಗೆರೆ ವರದಿಗಾರ ವಿಜಯಕುಮಾರ ಅವರು ರಜೆ ನಿಮಿತ್ತ ಊರಿಗೆ ಹೋಗಿದ್ದರು. ಜಮೀನಿನಲ್ಲಿ ನೀರು ಹಾಯಿಸುವಾಗ ಆಕಸ್ಮಿಕ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರಗೊಂಡಿದ್ದ ವಿಜಯ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದರು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Trending

Exit mobile version