ದಿನದ ಸುದ್ದಿ
ಸಾಲಗಾರರ ಕಿರುಕುಳ | ಕುಟುಂಬ ಸಮೇತ ನಾಪತ್ತೆ : ಪ್ರಕರಣ ದಾಖಲು
ಸುದ್ದಿದಿನ,ಬಳ್ಳಾರಿ : ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ 45 ವರ್ಷದ ಉಮೇಶ್ ಬಾಬು,38 ವರ್ಷದ ಉಮೇಶನ ಪತ್ನಿ ಅಂಬಿಕಾ ಹಾಗು ಅವರ ಮಕ್ಕಳಾದ 15 ವರ್ಷದ ಅಕೀಲಾ, 9ವರ್ಷದ ಮಣಿಕಂಠ ಅವರು ಮಾ.26 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾಗಿರುವ ಉಮೇಶಬಾಬು ಅವರ ಅತ್ತೆ ಡಿ.ಲಲಿತಮ್ಮ ಅವರು ಈ ಕುರಿತು ಠಾಣೆಗೆ ದೂರು ನೀಡಿದ್ದು,ಕಣೇಕಲ್ ಬಸ್ ನಿಲ್ದಾಣದ ಹತ್ತಿರದ ಫರ್ಟಿಲೈಸರ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅಳಿಯ ಉಮೇಶಬಾಬು ಅವರು ಅಂಗಡಿ ವ್ಯವಹಾರಕ್ಕಾಗಿಸಾಲಮಾಡಿಕೊಂಡಿದ್ದು,ಸಾಲಗಾರರು ಮನೆಗೆ ಬಂದು ಪದೇಪದೇ ಕೇಳುತ್ತಿದ್ದ ಹಿನ್ನೆಲೆ ಮನೆಗೆ ಬೀಗ ಹಾಕಿ ಕಾಣೆಯಾಗಿದ್ದಾರೆ. ಸಂಬಂಧಿಕರ ಹತ್ತಿರ ಹಾಗೂ ಬಳ್ಳಾರಿ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದವರ ಚಹರೆ ಗುರುತು
ಉಮೇಶ ಬಾಬು ಗುರುತು: ಕೋಲು ಮುಖ, ಗೋದಿ ಮೈ ಬಣ್ಣ, 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ತೆಲುಗು, ಕನ್ನಡ, ಹಿಂದಿ ಮಾತನಾಡುತ್ತಾನೆ. ಪ್ಯಾಂಟ್ ಶರ್ಟ್ ಧರಿಸಿರುತ್ತಾನೆ.
ಅಂಬಿಕಾ: ದುಂಡು ಮುಖ,ಗೋದಿ ಮೈಬಣ್ಣ, 5.5 ಅಡಿ ಎತ್ತರ, ದೃಢವಾದ ಮೈಕಟ್ಟು, ತೆಲುಗು, ಕನ್ನಡ ಮಾತನಾಡುತ್ತಾಳೆ.ಸೀರೆ ಧರಿಸಿರುತ್ತಾಳೆ.
ಮಗಳು ಅಕೀಲಾ: ಕೋಲು ಮೂಖ, ಗೋದಿ ಮೈ ಬಣ್ಣ, 5.2 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ತೆಲುಗು, ಕನ್ನಡ ಮಾತನಾಡುತ್ತಾಳೆ. ಚೂಡಿದಾರ ಧರಿಸಿರುತ್ತಾಳೆ.
ಮಗ ಮಣಿಕಂಠ: ದುಂಡು ಮುಖ, ಗೋದಿ ಮೈಬಣ್ಣ, 4.0 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ತೆಲುಗು, ಕನ್ನಡ ಮಾತನಾಡುತ್ತಾನೆ.
ಕಾಣೆಯಾದ ಕುಟುಂಬದ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂ.08392-258100, ಗಾಂಧಿನಗರ ಪೊಲೀಸ್ ಠಾಣೆ ದೂ.08392-272192, ಗಾಂಧಿನಗರ ಪಿ.ಎಸ್.ಐ. ಮೊ.9480803082, ಗಾಂಧಿನಗರ ಪಿ.ಐ.ಮೊ.9480803046ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243