ದಿನದ ಸುದ್ದಿ
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಸುದ್ದಿದಿನ ಡೆಸ್ಕ್ : ಶ್ರೀಲಂಕಾದಲ್ಲಿ ನಿನ್ನೆ ರಾತ್ರಿಯಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬಾಹ್ಯ ಸಾಲದ ಮೇಲಿನ ಮುಷ್ಕರ ಮತ್ತು ಪ್ರತಿಭಟನೆಯ ನಂತರ ಶ್ರೀಲಂಕಾ ಕಳೆದ 5 ವಾರಗಳಲ್ಲಿ ಇದೀಗ 2ನೇ ಬಾರಿಗೆ ತುರ್ತು ಪರಿಸ್ಥಿತಿ ಎದುರಿಸುವಂತಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು, ಸಾರ್ವಜನಿಕ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಹಾಗೂ ಸಮುದಾಯದ ಜೀವನಕ್ಕೆ ಅಗತ್ಯವಾದ ಸರಬರಾಜು ಮತ್ತು ಸೇವೆಗಳ ನಿರ್ವಹಣೆಗಾಗಿ ಈ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಜಪಕ್ಸ ಮತ್ತು ಇಡೀ ಸರ್ಕಾರ ರಾಜಿನಾಮೆ ನೀಡಬೇಕೆಂದು ದ್ವೀಪ ರಾಷ್ಟ್ರದಾದ್ಯಂತ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮುನ್ನ ಕಳೆದ ತಿಂಗಳು ಏಪ್ರಿಲ್ 1ರಂದು ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243