/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ದೀಪಿಕಾ‌ ಪಡುಕೋಣೆಯ ಎರಡೂವರೆ ಲಕ್ಷ ರೂ ಲೆಧರ್ ಪ್ಯಾಂಟ್..!

Published

on

ಮೊನ್ನೆ ಮೊನ್ನೆ ಅಷ್ಟೇ ಲಂಡನ್ ಗೆ ಹಾರಿದ ನಮ್ಮ ದೀಪು ಬೇಬಿ, ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಚೆಲುವೆ ಏನು ಮಾಡಿದರೂ  ದೊಡ್ಡ ಸುದ್ದಿ ಯಾಗುತ್ತದೆ.ಇನ್ನು  ಈಕೆ ಲಂಡನ್ ಗೆ ಹಾರಿದ್ದು ಯಾವುದೇ ಚಿತ್ರ ದ ಶೂಟಿಂಗ್ ಅಥವಾ ಫ್ಯಾಷನ್ ಶೋ ಗಾಗಿ ಅಲ್ಲ! ಪ್ರತಿಷ್ಠಿತ  ಮಾಡೆಮ್ ಟಾಸೆಡ್ಸ್ ಮ್ಯೂಸಿಯಂ ಸೇರಲಿದೆ ಈ ಚೆಲುವೆ ಮೇಣದ ಮೂರುತಿ. ಅದರ ಸಿದ್ಧತೆ ಗೆಂದು ಲಂಡನ್ ನಲ್ಲಿ ದೀಪಿಕಾ ಕಾಣಿಸಿಕೊಂಡದ್ದು ಹೀಗೆ.

 


ಅಂತರಾಷ್ಟ್ರೀಯ ಡಿಸೈನರ್ ವೇರ್ ನಲ್ಲಿ ದೀಪು  ಬೇಬಿ ಯ ಫ್ಯಾಷನ್ ಸ್ಪೇಟ್ ಮೆಂಟ್ ಫ್ಯಾಷನ್ ದುನಿಯಾದಲ್ಲಿ ಟಾಕ್ ಆಫ್ ದಿ ಡೇ ಆಗಿದೆ. ಟಾಮ್ ಫಾರ್ಡ್ ಬೂಟ್ಸ್.. ಅಲೆಂಕ್ಸಾಂಡರ್ ಮಾಕ್ ಕ್ವೀನ್ ನ  ಲೆಗ್ಗಿಂಗ್ ಪ್ಯಾಂಟ್..  ಬೆಲೆಂಸಿಯಾಗಾ ಕಪ್ಪು ಟೀಶರ್ಟ್ ನಲ್ಲಿ ಲಂಡನ್ ಏರ್ಪೋಟ್ ನಲ್ಲಿ ಕಾಣಿಸಿಕೊಂಡ ಬಾಲಿವುಡ್ ಬ್ಯೂಟಿ…ಯ ಏರ್ಪೋಟ್ ಲುಕ್ ಫ್ಯಾಷನ್ ದೀವಾ ಗಳಲ್ಲಿ ಚರ್ಚೆ ಗೆ ಗ್ರಾಸವಾಗಿದೆ.

 

ಇದರ ಬೆನ್ನಲ್ಲೀ..  ದೀಪಿಕಾ ತೊಟ್ಟ ಎರಡೂವರೆ ಲಕ್ಷ ಕ್ಕೂ ಅಧಿಕ ಬೆಲೆ ಬಾಳುವ ಬ್ಲಾಕ್ ಲೆಧರ್ ಪ್ಯಾಂಟ್ ಸ್ಟೋರಿ ಇಲ್ಲಿದೆ ನೋಡಿ.ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ರಾಂಡ್  ಪ್ರೊಂಜಾ ಶೋಲರ್( proenza shouler)  ನ ಸುಮಾರು US$3839 ಬಲೆಬಾಳುವ  ದುಬಾರಿ ಲೆಧರ್ ಪ್ಯಾಂಟ್ ಫ್ಯಾಷನ್ ದುನಿಯಾದಲ್ಲಿ ಸದ್ದು ಮಾಡುತ್ತಿದೆ.

ದೀಪಿಕಾ ರ ಸ್ಟೈಲಿಶ್ ಲುಕ್ ನ ಕ್ರೆಡಿಟ್ ಅವರ ಸ್ಟಲಿಸ್ಟ್ ಶಲೀನಾ ನಥಾನಿ ಗೆ ಸಲ್ಲುತ್ತದೆ. ಬಿಳಿ ಯ ಕಾಲರ್ ಶರ್ಟ್ ಮತ್ತು ಬೆಲ್ಟೆಡ್ ಬ್ಲಾಕ್ ಲೆಧರ್ ಪ್ಯಾಂಟ್ ನಲ್ಲಿ ಮಿಂಚಿದವು ದೀಪಿಕಾ ಎಂದಿನಂತೆ ತಮ್ಮ ಗುಳಿಕೆನ್ನೆಯ ನಗುವಿನೊಂದಿಗೆ ಕಾಣಿಸಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version