ದಿನದ ಸುದ್ದಿ

ಹೊಂಚುಕೋರರ ಪ್ಲಾನ್ ಉಲ್ಟಾ ಮಾಡಿದ ದೆಹಲಿ ಪೊಲೀಸರು !

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್: ದೇಶದಲ್ಲಿ ಶಾಂತಿ ಕದಡಲು ಹೊಂಚು ರೂಪಿಸಿದ್ದ ಖದೀಮರಿಗೆ ದೆಹಲಿ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತಂಡವು ದೆಹಲಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಆಗಸ್ಟ್ 6ರಂದು ದೊರೆತಿದ್ದ ಖಚಿತ ಮಾಹಿತಿಯ ಆಧಾರದ ಮೇರೆಗೆ ಧೀರಪುರ್ ನಲ್ಲಿ ದಾಳಿ ನಡೆಸಿದ ವಿಶೇಷ ತಂಡದ ಅಧಿಕಾರಿಗಳು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 50 ಪಿಸ್ತೂಲು, ಎರಡು ಕಾರ್ಬೈನ್, ಡಜನ್ ಗಟ್ಟಲೆ ಮ್ಯಾಗಜಿನ್ ಹಾಗೂ 50ಕ್ಕೂ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

Trending

Exit mobile version