ದಿನದ ಸುದ್ದಿ
ನೋಟು ಅಮಾನ್ಯೀಕರಣ | ಓವರ್ ಟೈಮ್ ಕೆಲಸ ಮಾಡಿದ ಬ್ಯಾಂಕ್ ನೌಕರರ ಹಣ ವಾಪಾಸ್ ಪಡೆಯಲು ಆದೇಶ
ಸುದ್ದಿದಿನ ಡೆಸ್ಕ್ | ಕಳೆದ ಎರಡು ವರ್ಷಗಳ ಹಿಂದೆ ರಜಾದಿನಗಳಲ್ಲೂ ನಿದ್ದೆ, ಆಹಾರ ಲೆಕ್ಕಕ್ಕೆ ತೆಗೆದುಕೊಳ್ಳದೇ ಅಮಾನ್ಯೀಕರಣದ ವೇಳೆ ಕೆಲಸ ಮಾಡಿದ್ದ ಬ್ಯಾಂಕ್ ನೌಕರರಿಗೆ ಎಸ್ಬಿಐ ಶಾಕಿಂಕ್ ನ್ಯೂಸ್ ನೀಡಿದ್ದು, ಅಮಾನ್ಯೀಕರಣ ವೇಳೆ ಹೊಸ ನೋಟ್ ಬದಲಾವಣೆ ಸಂದರ್ಭದಲ್ಲಿ ಓವರ್ ಟೈಮ್ ಹಣ ನೀಡಿದ್ದ ವಾಪಸ್ ಪಡೆಯುವ ಆದೇಶ ನೀಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಜತೆಗೆ ವಿಲನಗೊಂಡ ಐದು ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ ಬ್ಯಾಂಕುಗಳ 70,000 ನೌಕರರು ಹಣ ವಾಪಸ್ ಮಾಡಬೇಕಾಗಿದೆ. 2017ರ ಏಪ್ರಿಲ್ 1ರಂದು ಎಸ್‌ಬಿಐ ಜತೆಗೆ ವಿಲೀನಗೊಂಡಿದ್ದವು.
ಇದಕ್ಕೂ ಮೊದಲು ಅಂದರೆ 2016ರ 14ರಿಂದ ಡಿಸೆಂಬರ್ 30 ಅವಧಿಯಲ್ಲಿ ನೋಟುಗಳ ಅಮಾನ್ಯೀಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಬ್ಯಾಂಕ್‌ಗಳ ನೌಕರರು ಪರಿಹಾರ ಪಡೆಯಲು ಅರ್ಹರಲ್ಲ. ಈ ಕೆಲಸದ ತೀವ್ರ ಒತ್ತಡ ಇದ್ದುದರಿಂದ ನೌಕರರಿಗೆ ಓಟಿಯ ಭರವಸೆ ನೀಡಲಾಗಿತ್ತು.
ಇದೇ ವರ್ಷದ ಮಾರ್ಚ್ – ಮೇನಲ್ಲಿ ಅಧಿಕಾರಿಗಳಿಗೆ ಗರಿಷ್ಠ ತಲಾ 30,000 ರೂ. ಮತ್ತು ಇತರ ಸಿಬ್ಬಂದಿಗೆ ಅಂದಾಜು 15,000 ರೂ. ಪಾವತಿಸಿತ್ತು. ಆದರೆ, ವಿಲೀನ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಎಸ್.ಬಿಐನ ಕ್ರಮವನ್ನು ಅಲ್ಲೆಗಳೆದಿದ್ದು, ಎಸ್.ಬಿಐ ಬ್ಯಾಂಕ್ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401