ದಿನದ ಸುದ್ದಿ
ವಿವಿ ಪ್ಯಾಡ್ ಪ್ರಾತ್ಯಕ್ಷಿಕೆ
ಸುದ್ದಿದಿನ.ಹಾನಗಲ್ : ಮತದಾನ ಮಾಡುವುದು ಪವಿತ್ರ ಕಾರ್ಯ, ಪ್ರತಿಯೊಬ್ಬರೂ ತಮಗಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವಂತೆ ಹಾನಗಲ್ಲ ತಾಲೂಕಿನ ಸೆಕ್ಟರ್ ಅಧಿಕಾರಿ ಬಿ. ಎಂ. ಬೇವಿನಮರದ ಮನವಿ ಮಾಡಿದರು. ಹಾನಗಲ್ಲ ತಾಲೂಕಿನ ಹೊಂಕಣ ಗ್ರಾಮದಲ್ಲಿ ವಿವಿ ಪ್ಯಾಡ್ ಪ್ರಾತ್ಯಕ್ಷಿಕೆ ಕೈಗೊಂಡು ಬಳಿಕ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಕ್ಷೇತ್ರ, ದೇಶ ಪ್ರಗತಿಯತ್ತ ಸಾಗಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗುವುದು ಸ್ವತಃ ಮತದಾನ ಮಾಡಿದಾಗ ಮಾತ್ರ. ನಾವು ಮತದಾನ ಮಾಡುವುದು ಕೇವಲ ಸಾಂಕೇತಿಕವಲ್ಲ. ಅದು ನಮ್ಮ ಆಡಳಿತ ಯಂತ್ರ ಆಯ್ಕೆ ಮಾಡಿಕೊಳ್ಳಲು ಎಂಬುದನ್ನು ಅರಿತುಕೊಳ್ಳಬೇಕು. ಮತದಾನದಿಂದ ದೂರವುಳಿದರೆ ಅದು ಆತ್ಮವಂಚನೆ ಮಾಡಿಕೊಂಡಂತೆ ಎಂದು ಎಚ್ಚರಿಸಿದರು. ಸಿ. ಆರ್. ಪಿ. ಕುಮಾರ ಗೋಣಿಮಠ, ಪಿ. ಡಿ. ಓ. ಶಿಲ್ಪಾ ಕೊಪ್ಪದ ಮಾತನಾಡಿದರು. ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯದರ್ಶಿ ಪರಶುರಾಮ ಅಂಬಿಗೇರ, ಬಿ. ಎಲ್. ಓ. ರಾಮಪ್ಪ ವಾಸನದ, ಸಿದ್ದಮ್ಮ ಚೌಟಿ, ಆಶಾ ಕಾರ್ಯಕರ್ತೆ ಸವಿತಾ ವಾಸನದ, ಶೋಭಾ ಬಂಗೇರ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಹಿತ್ತಲಮನಿ, ಸ್ತ್ರೀ ಶಕ್ತಿ ಸಂಘದ ಗೀತಾ ಅಗಸಿಬಾಗಿಲ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401