ದಿನದ ಸುದ್ದಿ
ವಿವಿ ಪ್ಯಾಟ್ ನಾಶ ; 23 ಜನರ ಬಂಧನ
ಸುದ್ದಿದಿನ, ವಿಜಯಪುರ : ವಿದ್ಯುನ್ಮಾನ ಮತ ಯಂತ್ರಗಳನ್ನು ಸಾಗಿಸುತ್ತಿದ್ದ ಸೆಕ್ಟರ್ ಅಧಿಕಾರಿಗಳ ವಾಹನವನ್ನು ವಿಜಯಪುರ ಜಿಲ್ಲೆಯ ಬಸವನ ಬಾಗವಾಡಿ ವಿಧಾನಸಭಾ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ಅಡ್ಡಗಟ್ಟಿದ ಗ್ರಾಮಸ್ಥರು 2 ಕಂಟ್ರೋಲ್ ಯುನಿಟ್‌ಗಳು, 2 ಬ್ಯಾಲೆಟ್ ಯುನಿಟ್‌ಗಳು ಮತ್ತು 3 ವಿವಿ ಪ್ಯಾಟ್‌ಗಳನ್ನು ನಾಶಪಡಿಸಿದ್ದಾರೆ.
ಗ್ರಾಮಸ್ಥರು ಸೆಕ್ಟರ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ 23ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243