ದಿನದ ಸುದ್ದಿ
ವರದಿಗಾರರೆಂದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದವರ ಬಂಧನ
ಸುದ್ದಿದಿನ,ಮೈಸೂರು : ನಾವು ಯೂಟ್ಯೂಬ್ ವರದಿಗಾರರು ಎಂದು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಅಶೋಕ ರಸ್ತೆಯಲ್ಲಿರುವ ಉಮರ್ ಶರೀಫ್ ಎಂಬುವರ ಮನೆಗೆ ನಾವು ಯುಟ್ಯೂಬ್ ಚಾನಲ್ ವರದಿಗಾರರು, ನಿಮ್ಮ ಮನೆಯಲ್ಲಿ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ನಡೀತಿದೆ ಎಂದು ಅಭಿಲಾಶ್, ಮಣಿ, ಪ್ರದೀಪ್, ಬಸವರಾಜು ಹಾಗೂ ನವೀನ್ ಕುಮಾರ್ ಎಂಬುವರು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದಾರೆ.
ಇದನ್ನು ಗಮನಿಸಿದ ಸಾರ್ವಜನಿಕರಿಗೆ ಅನುಮಾನ ಬಂದಿದೆ. ವಿಷಯದ ಕುರಿತು ತಕ್ಷಣ ಸ್ಥಳೀಯ ಮಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂದಂತಹ ಪೊಲೀಸರು ಆ ಐವರನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅವರು ನಕಲಿ ವರದಿಗಾರರೆಂದು ತಿಳಿದು ಬಂದಿದೆ.
ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ಆರೋಪದಡಿ ಪೊಲೀಸರು ಐವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಪಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243