ದಿನದ ಸುದ್ದಿ

ವಾಜಪೇಯಿ ಶ್ರೇಷ್ಠ ನಾಯಕ, ಸಂಸದೀಯ ಪಟು; ಅವರ ಸ್ಥಾನ ಯಾರಿಂದಲೂ‌ ತುಂಬಲು ಆಗದು | ದೇವೇಗೌಡ

Published

on

ಸುದ್ದಿದಿನ ಡೆಸ್ಕ್ | ವಾಜಪೇಯಿ ಅವರು ನಿಧನ ಸುದ್ದಿ ಕೇಳ ಆಘಾತ ಆಗಿದೆ ,, ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅಪಾರ ಸೇವೆ ಮಾಡಿದ್ದಾರೆ ,, ಅವರೊಬ್ಬ ಶ್ರೇಷ್ಟ ನಾಯಕ, ಸಂಸದೀಯ ಪಟು ,, ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದರು‌.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಶತ್ರುವನ್ನೂ ಕೂಡ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ನಾನು ಪ್ರಧಾನಿಯಾಗಿ ರಾಜೀನಾಮೆ ಕೊಡುವ ವೇಳೆ ದೂರವಾಣಿ ಮುಖೇನ ಅಧಿಕಾರ ಉಳಿಸಿಕೊಡುತ್ತೇನೆ ಎಂದು ಹೇಳಿದ್ರು ರಾಜಕಾರಣದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು. ಪಾಕಿಸ್ತಾನದ ಸಂಬಂಧ ಕುದುರಿಸಲು ಲಾಹೋರ್ ಗೆ ಬಸ್ ಯಾತ್ರೆ ಮಾಡಿದ್ರು ,, ಮುಷ್ರಪ್ ಅವರನ್ನು ಕರೆಸಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ರು ,, ಆದ್ರೆ ಸಫಲವಾಗಲಿಲ್ಲ ,, ಶಾಂತೀಯತೆ ಕಾಪಾಡಲು ಪ್ರಯತ್ನ ಮಾಡಿದ್ರು ,, ಜೊತೆಗೆ ನಮ್ಮ ಸೈನಿಕರ ಸಾಮರ್ಥ್ಯವನ್ನೂ ತೋರಿಸಿಕೊಟ್ಟಿದ್ದಾರೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ರಾಜ್ಯ, ರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು ಗೋದ್ರಾ ಪ್ರಕರಣ ಆದಾಗ ಅಂದಿನ ಸಿಎಂ ಮೋದಿ ಅವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಕಠಿಣವಾಗಿ ಹೇಳಿದ್ರು ,, ತಮ್ಮ ಪಕ್ಷದ ಸಿಎಂ ಆಗಿದ್ರೂ ಅಂತಮಾತು ಹೇಳಿದ್ದು ಅವರ ವ್ಯಕ್ತಿತ್ವ ಎಂತದ್ದು ಎಂದು ತೋರಿಸುತ್ತದೆ. ಪ್ರತಿ ವರ್ಷ ಜನೆವರಿಯಲ್ಲಿ ಅವರ ಮನೆಗೆ ಹೋಗಿ ಬರ್ತಿದ್ದೆ. ರಾಜಕೀಯದಲ್ಲಿ ಯಾವುದೇ ಧರ್ಮ ಜಾತಿಗೆ ನೋವುಉಂಟುಮಾಡಬಾರದು ಎನ್ನುವುದಕ್ಕೆ ಗೋದ್ರಾ ಪ್ರಕರಣದಲ್ಲಿ ಅವರು ನಡೆದುಕೊಂಡ ರೀತಿಯೇ ಸಾಕ್ಷಿ. ಅವರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿ ರಾಮಮಂದಿರ ಕಟ್ಟಲು ಶಿಲೆಗಳನ್ನ ಕಳಿಸಿಕೊಟ್ರು, ಅದನ್ನ ವಾಜಪೇಯಿಯವರೇ ತೆಗೆದುಕೊಳ್ಳಬೇಕು ಎಂದು ವಿಹೆಚ್ ಪಿ ಮುಖಂಡರು ಕಟುವಾಗಿ ಹೇಳಿದ್ರು ಆದ್ರೆ ಪ್ರಧಾನಿಯಾಗಿದ್ದಾಗ ಅವರು ಹೋಗದೇ ಅಧಿಕಾರಿಯನ್ನ ಕಳಿಸಿದ್ರು.

ನಾಳೆ ದೆಹಲಿಗೆ ಹೋಗುತ್ತೇನೆ ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸುತ್ತೇನೆ‌.ಯಾರನ್ನೂ ನೋಯಿಸಬಾರದು ಅನ್ನೋ ಮನೋ ಭಾವನೆ ಹೊಂದಿದ್ದರು ವಾಜಪೇಯಿ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಡಲಿ. ಅವರ ಸಂಬಂಧಿಕರಿಗೆ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದ ವ್ಯವಸ್ಥೆಗಳನ್ನ ನೋಡಿಕೊಂಡು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version