ದಿನದ ಸುದ್ದಿ

642ಕೋಟಿ ರೂಪಾಯಿ ವೆಚ್ಚದಲ್ಲಿ 57ತಾಲ್ಲೂಕುಗಳ ಜಲಾನಯನಪ್ರದೇಶ ಅಭಿವೃದ್ಧಿ: ಸಚಿವ ಬಿ.ಸಿ. ಪಾಟೀಲ್

Published

on

ಸುದ್ದಿದಿನ,ಹಾವೇರಿ : ರಾಜ್ಯದ 57 ತಾಲ್ಲೂಕುಗಳು ಜಲಾಯನ ಪ್ರದೇಶಾಭಿವೃದ್ಧಿಗೆ ಆಯ್ಕೆ ಆಗಿದ್ದು, 642ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯಡಿ ಆಯ್ಕೆಯಾಗಿರುವ ತಾಲ್ಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದುಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಜಲಾಯನ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು, ಜಲಾಯನ ಪ್ರದೇಶಾಭಿವೃದ್ಧಿ ಯೋಜನೆಯಡಿ ರೈತರ ಜಮೀನುಗಳಲ್ಲಿ ಬದುಗಳ ನಿರ್ಮಾಣ ಹಾಗೂ ಚೆಕ್‌ಡ್ಯಾಮ್ ನಿರ್ಮಿಸುವ ಮೂಲಕ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version