ದಿನದ ಸುದ್ದಿ

ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ಭೇಟಿ ತಪ್ಪಿಲ್ಲ ; : ಸಚಿವ ಮಾಧುಸ್ವಾಮಿ

Published

on

ಸುದ್ದಿದಿನ, ಚಿತ್ರದುರ್ಗ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಮುಕ್ತವಾದರೆ ಮತ್ತೆ ಸಚಿವರಾಗುತ್ತಾರೆ. ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.!

ಚಿತ್ರದುರ್ಗ ದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದರಲ್ಲಿ ಯಾವ ತಪ್ಪಿಲ್ಲ, ಯಾರನ್ನ ಯಾರು ಬೇಕಾದ್ರೂ ಭೇಟಿ ಮಾಡಬಹುದು. ಅವರು ನಮ್ಮ ಪಕ್ಷದ ನಾಯಕ. ಅವರಿಗೆ ಬೆಳಗಾಂ, ಬಾಂಬೆ ನಿಕಟ ಸ್ಥಳಗಳಾಗಿವೆ ಹಾಗಾಗಿ ನೋಡಿರುತ್ತಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಮುಕ್ತವಾದರೆ ಮತ್ತೆ ಸಚಿವರಾಗುತ್ತಾರೆ, ಅದರಲ್ಲಿ ಯಾವ ಗೊಂದಲವಿಲ್ಲ ಎಂದಿದ್ದು, ಸಂತ್ರಸ್ಥ ಯುವತಿಯ ಕೇಸ್ ಹಳ್ಳ ಹಿಡಿಯುತ್ತಿದೆಯಾ ಎಂಬ ಚರ್ಚೆಯೂ ಸದ್ದು ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version