ಸಿನಿ ಸುದ್ದಿ
ಮಾದಕ ಸೇವನೆಗೆ ದಾಸರಾಗಿರೋ ಯುವಜನತೆಗೆ ‘ಟಗರು ಡಾಲಿ’ ಏನಂದ್ರು ಗೊತ್ತಾ..?
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಭಿಯಾನದ ಕುರಿತು 5 k ಮ್ಯಾರಥನ್ ಕಾರ್ಯಕ್ರಮನ್ನು ಕೋರಮಂಗಲದ ಲಕ್ಷ್ಮಿ ದೇವಿ ಮೈದಾನದಲ್ಲಿ ಆಗ್ನೇಯ ವಿಭಾಗ ಪೊಲೀಸರು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ, ಈಶ್ಯಾನ ವಿಭಾಗದ ಡಿಸಿಪಿ ಬೋರ್ ಲಿಂಗಯ್ಯ , ಚಿತ್ರ ನಟ ಧನಜಯ್ ಅಲಿಯಾಸ್, ಸಿಂಧು ಲೋಕ್ ನಾಥ್, ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ SAY NO TO DRUGS ಎಂಬ ಧ್ಯೆಯ ವ್ಯಾಕದೂಂದಿಗೆ
ರಾಮಲಿಂಗಾರೆಡ್ಡಿ ರಿಂದ 5 k ಮ್ಯಾರಥನ್ ಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಟ ಧನಂಜಯ್ ಮಾತನಾಡಿ, ಕೋರಮಂಗಲ ಪೊಲೀಸರು ಜಾಗೃತಿ ಮೂಡಿಸಿರೋದು ಸಂತಸದ ವಿಷಯವಾಗಿದೆ. ಮಾದಕ ವಸ್ರುಗಳು ಈಗ ಬೇರೆ ಬೇರೆ ರೀತಿಯಲ್ಲಿ ಸಿಗ್ತುತ್ತಿವೆ. ಅದಕ್ಕೆ ಕಡಿವಾಣ ಹಾಕೋದು ಕಷ್ಟವಾಗಿದೆ. ಇದು ಯುವ ಜನತೆಯಲ್ಲಿ ಒಂದು ಫ್ಯಾಷನ್ ಆಗಿದೆ.
ಆದ್ದರಿಂದ ಅವರು ಮಾದಕವಸ್ತುಗಳ ಸೇವನೆಯನ್ನು ಬಿಟ್ಟು, ಇನ್ನಿತರ ಒಳ್ಳೆ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಬೇಕು ಆಗ ತನ್ನಿಂತಾನೆ ಮಾದಕ ಸೇವನೆ ಸ್ವಲ್ಪವಾದ್ರು ಕಡಿಮೆ ಆಗುತ್ತೆ ಎಂದರು.
ನಂತರ ನಟಿ ಸಿಂಧೂ ಲೋಕನಾಥ್ ಮಾತನಾಡಿ
ಇದು ಒಳ್ಳೆಯ ಕ್ಯಾಂಪೇನ್ ಆಗಿದೆ. ಈಗ ಸ್ಕೂಲಿನ ಮಕ್ಕಳು ಮಾದಕ ವಸ್ತುಗಳ ದಾಸರಾಗ್ತಿದ್ದಾರೆ. ಹಾಗೇ ಮಾರಾಟ ಕೂಡಾ ಮಾಡ್ತಿದ್ದಾರೆ.ಬಕೋರಮಂಗಲ ಪೊಲೀಸ್ರು ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಕ್ಕಳಿಗೆ ಪೋಷಕರು ಮೊದಲು ಜಾಗೃತಿ ಮೂಡಿಸಬೇಕು.
ಆಗ ಡ್ರಗ್ಸ್ ಗೆ ನೋ ಅಂತಾರೆ. ಲೈಪ್ ಗೆ ಎಸ್ ಅಂತಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401