ರಾಜಕೀಯ
ಧಾರವಾಡ ಲೋಕಸಭೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ
ಸುದ್ದಿದಿನ ಡೆಸ್ಕ್ : ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿಯವರನ್ನು ಎಐಸಿಸಿ ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಯವರು, ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿಗಳಾದ ಶ್ರೀ ಜಿ. ಪರಮೇಶ್ವರ, ಗೃಹ ಸಚಿವರಾದ ಎಂ. ಬಿ. ಪಾಟೀಲ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್, ವಿ. ದೇಶಪಾಂಡೆ, ಸಚಿವರಾದ ದಿವಂಗತ ಸಿ. ಎಸ್. ಶಿವಳ್ಳಿ ಹಾಗೂ ಅವರ ಸಹೋದರರಾದ ಶನ್ನುಖ ಶಿವಳ್ಳಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕರಾದ ಸಂತೋಷ್ ಲಾಡ್, ಎನ್. ಎಚ್. ಕೋನರೆಡ್ಡಿ, ಶಾಕಿರ್ ಸನದಿ ಶ್ರೀನಿವಾಸ ಮಾನೆ ಅವರಿಗೆ ನನ್ನ ತುಂಬು ಹೃದಯಪೂರ್ವಕ ಧನ್ಯವಾದಗಳು.
ಹಾಗೆ ಎಲ್ಲ ನನ್ನ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು,ಕೆಪಿಸಿದಿ ಸದಸ್ಯರು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401