ಸಿನಿ ಸುದ್ದಿ
‘ದಾರಿ ತಪ್ಪಿದ ಮಗ’ ನಾಗಿ ರಾಜ್ ಮೊಮ್ಮಗನ ಖಡಕ್ ಎಂಟ್ರಿ..!
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಮ್ಮೆ ಬರಲಿದ್ದಾನೆ ದಾರಿ ತಪ್ಪಿದ ಮಗ. ಅಣ್ಣಾವ್ರು ಸಿನಿಮಾ ಹೆಸ್ರಲ್ಲೇ ಡಾ.ರಾಜ್ ಮೊಮ್ಮಗ ಇಂಡಸ್ಟ್ರಿ ಎಂಟ್ರಿ ಕೊಡ್ತಾ ಇದಾರೆ.
ರಾಮ್ ಕುಮಾರ್ ಮಗ ಧೀರೇನ್ ರಾಮ್ ಕುಮಾರ್ ನಟನೆಯ ದಾರಿ ತಪ್ಪಿದ ಮಗ ಸಿನೆಮಾ ಶುರುವಾಗಿದ್ದು, ಹಬ್ಬದ ವಿಶೇಷ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ.
ಯಶ್ ರ ಮೈ ನೇಮ್ ಈಸ್ ಕಿರಾತಕ ಡೈರೆಕ್ಟರ್ ಅನಿಲ್ ಈ ಸಿನೆಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಜಯಣ್ಣ ಕಂಬೈನ್ಸ್ ನಡಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ರಾ ಲುಕ್ ನಲ್ಲಿ ಧೀರೇನ್ ಮಿಂಚುತ್ತಿರುವ ಪೋಸ್ಟರ್ ಗೆ ಕನ್ನಡಿಗರಯ ಫಿದಾ ಆಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401