ಕ್ರೀಡೆ

ಧೋನಿ- ರೈನಾ ಕ್ರಿಕೆಟ್ ಗೆ ವಿದಾಯ..!? ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

Published

on

ಸುದ್ದಿದಿನ,ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟಿಗ ಸುರೇಶ್ ರೈನಾ ಸಹ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಇನ್‍ಸ್ಟಾಗ್ರಾಂನಲ್ಲಿ ಎಲ್ಲ ಆಟಗಾರ ಜೊತೆಗಿನ ಫೋಟೋ ಹಂಚಿಕೊಂಡಿರುವ ಸುರೇಶ್ ರೈನಾ, ನಿಮ್ಮ ಜೊತೆಗಿನ ಆಟವಿಲ್ಲದ ಮೇಲೆ ಮತ್ತೇನು? ನಿಮ್ಮ ಬಗ್ಗೆ ನನ್ನ ಹೃದಯದಲ್ಲಿ ಗೌರವದ ಸ್ಥಾನವಿದೆ. ನಾನು ಸಹ ನಿಮ್ಮ ಮಾರ್ಗವನ್ನು ಸೇರಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇಬ್ಬರು ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲಿದ್ದಾರೆ.

ಈ ವಿಷಯ ತಿಳಿಯುತ್ತಲೇ ಧೋನಿ ಮತ್ತು ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ವಿಶ್ವಕಪ್ ನಲ್ಲೂ ನಿಮ್ಮ ಆಟ ನೋಡುವ ಆಸೆಯಿಂದ ಇದ್ದೆವು ನಿಮ್ಮ ಈ ನಿಲುವು ನಮಗೆ ನಿರಾಸೆ ಮೂಡಿಸಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version