ರಾಜಕೀಯ

ಬ್ರೇಕಿಂಗ್ : ರಾಜ್ಯದಲ್ಲಿ ಪೆಟ್ರೋಲ್ ಡಿಸೆಲ್ ಬೆಲೆ ಇಳಿಕೆಗೆ ಸಿಎಂ ನಿರ್ಧಾರ

Published

on

ಸುದ್ದಿದಿನ ಡೆಸ್ಕ್: ಲೀಟರ್ ಡಿಸೆಲ್ , ಪೆಟ್ರೋಲ್ ಮೇಲಿನ ಬೆಲೆ 2 ರೂಪಾಯಿ ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‌ಘೋಷಿಸಿದರು.

ಕಲಬುರಗಿಯಲ್ಲಿ ಆಯೋಜಿಸಿದ್ದ 70 ನೇ ಹೈದ್ರಬಾದ್ ಕರ್ನಾಟಕ ವಿಮೋಚನ ದಿನಾಚರಣೆ ವೇಳೆ ಲಿ ಸಾರ್ವಜನಿಕರನ್ನ ಉದ್ದೇಶಿಸಿ ಸಿಎಂ ಎಚ್‌ಡಿಕೆ ಮಾತನಾಡಿದರು.

ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಸಾಕಷ್ಟು ಏರಿಕೆ ಆಗುತ್ತಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಡಿಸೆಲ್ ಮೇಲಿನ ಸಿಸ್ ಇಳಿಕೆ ಮಾಡುವ ಮೂಲಕ 2 ರೂಪಾಯಿ ದರ ಕಡಿಮೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ವಿಮಾನ ಭೂ ಸ್ಪರ್ಶ ರೋಮಾಂಚನ

ಕಲಬುರಗಿ ಏರ್‌ಪೋಟ್೯ನಲ್ಲಿ ನಮ್ಮ‌ ವಿಮಾನ ಭೂಸ್ಪರ್ಷವಾದಗ ರೋಮಾಂಚನವಾಗಿದೆ. ಕಲಬುರಗಿ
ಹೈದ್ರಬಾದ್ ಕರ್ನಾಟಕದ ಪ್ರದೇಶದ ಹೆಬ್ಬಾಗಿಲು ಆಗಲಿದೆ.ರೈತರ ಬದುಕನ್ನ ಹಸನು ಮಾಡಲು ಹೈ ಕ ಭಾಗದ ಎರಡು ಜಿಲ್ಲೆಗಳು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಇಸ್ರೆಲ್ ಮಾದರಿಯ ಕೃಷಿ ಯೋಜನೆ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಮಾಡಲಾಗುವುದು. ಕಲಬುರಗಿಯಲ್ಲಿ ಪದವಿಧರರಿಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೀದರ್ ಸಂಸದ ಭಗವಂತ ಖೂಬಾ, ಶಾಸಕ ರಹೀಮ್ ಖಾನ್, ಪರಿಷತ್ ಸದಸ್ಯರಾದ ಅರವಿಂದ, ರಘುನಾಥ್ ಮಲ್ಕಾಪುರೆ, ವಿಜಯ್ ಸಿಂಗ್, ಎಸ್ಪಿ ಟಿ ಶ್ರೀಧರ್, ಸಿಇಓ ಸೇಲ್ವಮಣಿ ಇತರರು ಭಾಗಿದ್ದರು.

Leave a Reply

Your email address will not be published. Required fields are marked *

Trending

Exit mobile version