ಸಿನಿ ಸುದ್ದಿ
ವೀಡಿಯೋ | ಮನಸಾರೆ ಸಿನಿಮಾ ಸಮಯದಲ್ಲೆ ಪ್ರೀತಿಸೋಕೆ ಶುರು ಮಾಡಿದ್ವಿ : ನಟ ದಿಗಂತ್
ಸುದ್ದಿದಿನ ಡೆಸ್ಕ್ : ಮನಸಾರೆ ಸಿನಿಮಾ ಸಮಯದಲ್ಲೆ ಪ್ರೀತಿಸೋಕೆ ಶುರು ಮಾಡಿದ್ವಿ. ನಮ್ಮ ಫ್ಯಾಮಿಲಿ ಮೆಂಬರ್ಸ್ ಎಲ್ರೂ ಅಬ್ರಾಡ್ ನಲ್ಲಿ ಇರೋದ್ರಿಂದ ಕ್ರಿಸ್ಮಸ್ ಗೆ ಎಲ್ರಿಗೂ ರಜಾ ಸಿಗೋದ್ರಿಂದ ಡಿಸೆಂಬರ್ನಲ್ಲಿ ಮದುವೆ ಫಿಕ್ಸ್ ಮಾಡಿದ್ವಿ. ಕಡೆಗೂ ನಮ್ಮ ಡ್ರೀಮ್ ವೆಡ್ಡಿಂಗ್ ಸಕ್ಸಸ್ ಫುಲ್ ಆಗಿಯೇ ಆಯ್ತು. ಐಂದ್ರಿತಾ ರೈ ಫ್ಯಾಮಿಲಿ ನಂಗೆ ತುಂಬಾ ಇಷ್ಟ. ಅವರ ತಂದೆ ತಾಯಿಗೆ ನನ್ನ ಬಗ್ಗೆ ಬಹಳ ಕಾಳಜಿ ಎಂದು ಸುದ್ದಿಗೋಷ್ಟಿಯಲ್ಲಿ ನಟ ದಿಗಂತ್ ತಿಳಿಸಿದರು.
ನನ್ನ ಮೇಲಿನ ಪ್ರೀತಿಯಿಂದ ನಮ್ಮ ಮನೆ ಪದ್ದತಿ ಯಂತೆಯೇ ಇಡೀ ದಿನ ಉಪವಾಸ ಮಾಡಿದ್ರು ದಿಗಂತ್. ನಿಸರ್ಗಕ್ಕೆ ತೊಂದರೆಯಾಗದಂತೆ ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡದೆ, ಇಕೋ ಫ್ರೆಂಡ್ಲಿಯಾಗಿ ಮದುವೆಯಾದ್ವಿ. ಪ್ರಾಣಿಗಳನ್ನ ಕಂಡ್ರೆ ದಿಗಂತ್ ಗೆ ಬಹಳ ಇಷ್ಟ. ಅವರ ಆ ಗುಣ ನನಗೆ ಬಹಳ ಇಷ್ಟ.ನನಗೆ ಹುಷಾರ್ ಇಲ್ಲದಾಗ ಶೂಟಿಂಗ್ ಸ್ಪಾಟ್ ಗೆ ಅವರು ಫ್ರೂಟ್ಸ್ ಬೌಲ್ ಕಳಿಸಿ, ಗೆಟ್ ವೆಲ್ ಸೂನ್ ಅಂತ ವಿಶ್ ಮಾಡಿದ್ರು. ಫೈನಲಿ ಪ್ರೇಮಿಗಳಾಗಿದ್ದ ನಾವೀಗ ಮದುವೆಯಾಗಿದ್ದೀವಿ. ಹನಿಮಮೂನ್ ಇನ್ನೂ ಪ್ಲಾನ್ ಮಾಡಿಲ್ಲ. ಒಳ್ಳೆ ಸ್ಕ್ರಿಪ್ಟ್ ಸಿಕ್ರೆ ಖಂಡಿತ ಒಟ್ಟಿಗೆ ಸಿನಿಮಾ ಮಾಡ್ತೀವಿ ಎಂದು ಐಂದ್ರಿತ ರೈ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401