ದಿನದ ಸುದ್ದಿ
ಓದುಗರಿಗಾಗಿ ಡಿಜಿಟಲ್ ಗ್ರಂಥಾಲಯ
ಸುದ್ದಿದಿನ,ದಾವಣಗೆರೆ : ಸಾರ್ವಜನಿಕ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮುಖಾಂತರ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ.
ಈ ಡಿಜಿಟಲ್ ಗ್ರಂಥಾಲಯದ ಆ್ಯಪ್‍ನಲ್ಲಿ ಎಲ್ಲ ವಯೋಮಾನದ ಓದುಗರಿಗೆ ಅನುಕೂಲವಾಗುವಂತೆ
ಇ-ಪುಸ್ತಕಗಳು ಹಾಗೂ ವಿಡಿಯೋಗಳನ್ನು ಅಪ್‍ಲೋಡ್ ಮಾಡಲಾಗಿದ್ದು, ತಮ್ಮ ಸ್ಮಾರ್ಟ್‍ಫೋನ್‍ನ ಪ್ಲೇ ಸ್ಟೋರ್‍ನಲ್ಲಿ “e-Sarvajanika Granthalaya” ಎಂದು ಟೈಪ್ ಮಾಡಿ ಈ ಆ್ಯಪ್‍ನ್ನು ತಮ್ಮ ಫೋನ್‍ನಲ್ಲಿ ಅಳವಡಿಸಿಕೊಂಡಿದ್ದಲ್ಲಿ ಮನೆಯಲ್ಲೇ ಕುಳಿತು ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243