ದಿನದ ಸುದ್ದಿ

ವಿಶ್ವ ಪುಸ್ತಕ ದಿನ : ಡಿಜಿಟಲ್ ಗ್ರಂಥಾಲಯಕ್ಕೆ ಭಾರೀ ಬೇಡಿಕೆ ; ಕೂಡಲೇ ಆ್ಯಪ್ ಡೌನ್‌ಲೋಡ್ ಮಾಡಿ ಓದಿ

Published

on

ಸುದ್ದಿದಿನ,ಬೆಂಗಳೂರು : ಸಾಹಿತ್ಯ ಪ್ರೇಮಿಗಳಿಗಾಗಿ ಡಿಜಿಟಲ್ ಗ್ರಂಥಾಲಯವನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಾರಂಭಿಸಿದೆ. ಇದರ ಸಾರಥ್ಯವನ್ನು ಗ್ರಂಥಾಲಯ ನಿರ್ದೇಶಕ ಸತೀಶ್​ ಹೊಸಮನಿ ವಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮೊಬೈಲ್ ಆ್ಯಪ್​ಗೆ ಭಾರೀ ಬೇಡಿಕೆ ಉಂಟಾಗಿದ್ದು, 42 ಸಾವಿರಕ್ಕೂ ಅಧಿಕ ಸಾಹಿತ್ಯ ಆಸಕ್ತರ ನೋಂದಣಿ ಮಾಡಿಕೊಂಡಿದ್ದಾರೆ.

ಲಾಕ್​ಡೌನ್​ ವೇಳೆ ಲಾಕ್​ಫ್ರೀ ಇ-ಬುಕ್ ಓದಲು ನೀವು ಇಲಾಖೆಯ ವೆಬ್ಸೈಟ್ ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ. ಲಿಂಕ್ ಈ ಕೆಳಕಂಡಂತೆ ಇದೆ.

https://www.karnatakadigitalpubliclibrary.org/ ಗೆ ಭೇಟಿ ನೀಡಿ.

ಈ ವೆಬ್ಸೈಟ್ ನಲ್ಲಿ ಎಲ್ಲಾ ಭಾಷೆಯ ಪುಸ್ತಕಗಳು ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯವಿದೆ. ಡಿಜಿಟಲ್ ಗ್ರಂಥಾಲಯದಿಂದ ದಿನದಿಂದ ದಿನಕ್ಕೆ ಹೆಚ್ಚು ಪುಸ್ತಕ ಅಸಕ್ತರು ಓದುತ್ತಿದ್ದಾರೆ.

ಈ ಯೋಜನೆ ಇನ್ನೊಂದು ವಿಶೇಷವೇನೆಂದರೆ, ಲಾಕ್ ಡೌನ್ ಸಮಯದಲ್ಲಿ‌ ಲಾಕ್ ಪ್ರೀ ಬುಕ್ ಯಾರು ಹೆಚ್ಚು ಓದುತ್ತಾರೋ ಅವರಿಗೆ ಗೌರವಿಸಲಾಗುತ್ತದೆ ಎಂದು ಗ್ರಂಥಾಲಯ ನಿರ್ದೇಶಕ ಸತೀಶ್​ ಹೊಸಮನಿ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version